ಮಕ್ಕಳ ಸಿನಿಮಾದಲ್ಲಿ ಜಾಕ್ವೆಲಿನ್

ಈ ಸುದ್ದಿಯನ್ನು ಶೇರ್ ಮಾಡಿ

Bolly

ಬಾಲಿವುಡ್‍ನ “ವಸ್ತ್ರದ್ವೇಷಿ” ನಟಿ ಎಂದೇ ಗುರುತಿಸಿಕೊಂಡಿರುವ ಬೋಲ್ಡ್ ನಟಿ ಜಾಕ್ವೆಲಿನ್ ಮತ್ತು ಜಾಕಿಶ್ರಾಫ್ ಮಗ ಟೈಗರ್ ಶ್ರಾಫ್ ಅಭಿನಯದ ಮಕ್ಕಳ ಸಿನಿಮಾ `ಎ ಫ್ಲೈಯಿಂಗ್ ಜಟ್’ ಇದೇ ತಿಂಗಳು 25ರಂದು ತೆರೆ ಕಾಣಲಿದೆ.   `ಹಸಿ ಬಿಸಿ’ ದೃಶ್ಯಗಳು `ಬಿಕಿನಿ’ ಸೀನ್‍ಗಳಲ್ಲೇ ಹೆಚ್ಚಾಗಿ ಮಿಂಚಿ ಪಡ್ಡೆ ಹುಡುಗರ `ಡ್ರೀಮ್’ ಆಗಿರುವ ಜಾಕ್ವೆಲಿನ್ ಅಭಿನಯದ ಸಿನಿಮಾಕ್ಕೆ `ಯು’ ಸರ್ಟಿಫಿಕೆಟ್ ಸಿಕ್ಕುತ್ತಿರುವುದು ಇದೇ ಮೊದಲು. ವೃತ್ತಿಪರ ಕುಸ್ತಿಪಟು ನಾಥನ್ ಜೋನ್ಸ್ ಕೂಡ `ಎ ಫ್ಲೈಯಿಂಗ್ ಜಟ್’ನಲ್ಲಿ ಲೀಡ್ ರೋಲ್‍ನಲ್ಲಿದ್ದಾರೆ. ಈ ಚಿತ್ರದ ಟ್ರೈಲರ್ ಈಗಾಗಲೇ ಪ್ರಸಾರವಾಗುತ್ತಿದ್ದು, ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುತ್ತಿದೆ. ತಮ್ಮ ಈ ಸಿನಿಮಾ ಬಗ್ಗೆ ನಿರ್ದೇಶಕ ರೆಮೊ `ಡಿ’ಸೋಜಾ ಫುಲ್ ಖುಷ್ ಆಗಿದ್ದಾರೆ.
`ಎಬಿಸಿಡಿ’ (ಎನಿ ಬಡಿ ಕ್ಯಾನ್ ಡ್ಯಾನ್ಸ್) ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ರೆಮೋಗೆ `ಯು’ ಸರ್ಟಿಫಿಕೆಟ್ ಆತಂಕ ಎದುರಾಗಿದೆ. `ಬಾಗಿ’ ಚಿತ್ರದ ನಟ ಟೈಗರ್ ಶ್ರಾಫ್ ಈ ಸಿನಿಮಾದ ಕೆಲ ದೃಶ್ಯಗಳಲ್ಲಿ ಸಿಖ್ ಪಾತ್ರ ವಹಿಸಿದ್ದಾನೆ. ಹೀಗಾಗಿ ಎಚ್ಚರಿಕೆಯಿಂದ ಚಿತ್ರೀಕರಣ ನಡೆಸಲಾಗಿದೆ ಎನ್ನುತ್ತಾರೆ ಡೈರೆಕ್ಟರ್.

► Follow us on –  Facebook / Twitter  / Google+

Facebook Comments

Sri Raghav

Admin