ಮಗುವಿನಾಕಾರದ ಗೆಣಸು

ಈ ಸುದ್ದಿಯನ್ನು ಶೇರ್ ಮಾಡಿ

Genasu

ಯಲಹಂಕ, ಆ.23– ಪ್ರಕೃತಿಯಲ್ಲಿ ಪ್ರತಿ ದಿನ ಒಂದಿಲ್ಲೊಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ.  ಇದಕ್ಕೆ ಉತ್ತಮ ಸಾಕ್ಷಿ ಎಂದರೆ ನ್ಯಾಯಾಂಗ ಬಡಾವಣೆಯ ಸರಸ್ವತಮ್ಮ ಎಂಬುವವರ ತಾರಸಿ ಮೇಲೆ ಬೆಳೆದ ಗೆಣಸು. ಏನೀ ಗೆಣಸಿನ ವಿಶೇಷ ಅಂತೀರಾ… ಸುಮಾರು 13 ಕೆ.ಜಿ.ತೂಕದ ಗೆಣಸು ಮಗುವಿನ ಆಕಾರದಲ್ಲಿದೆ. ಮತ್ತೊಂದು ಗೆಣಸು ಆಂಜನೇಯ ಗದೆಯಂತಿದ್ದು, ಸಾರ್ವಜನಿಕರನ್ನು ಮೂಕವಿಸ್ಮಿತರನ್ನಾಗಿಸಿದೆ. ಇಂದು ಇತ್ತೀಚಿನ ದಿನಗಳಲ್ಲಿ ಮಿತಿ ಮೀರಿದ ತಾಪಮಾನದಿಂದ ಗೊಬ್ಬರ, ನೀರು ಎಲ್ಲಾ ಹಾಕಿ ಹೊಲದಲ್ಲಿ ಬೆಳೆದರೂ ಇಂತಹ ಫಸಲು ಬರುವುದು ಕಷ್ಟ. ಆದರೆ ಸರಸ್ವತಮ್ಮನವರ ತಾರಸಿ ಮೇಲೆ ಬೆಳೆಯಲಾಗಿರುವ ತರಕಾರಿಗಳು ತುಂಬಾ ಹುಲುಸಾಗಿಯೇ ಬೆಳೆದಿದ್ದು, ಜಮೀನಿನಲ್ಲಿ ಬೆಳೆಯುವುದಕ್ಕಿಂತ ಹೆಚ್ಚಿನ ಇಳುವರಿಯೇ ನೀಡಿದೆ.

ತಾರಸಿ ಮೇಲೆ ಕಬ್ಬು, ಟೊಮ್ಯಾಟೋ, ಬದನೆ, ಸೊಪ್ಪು ಬೆಳೆಯಲಾಗಿದೆ. ಅದರಲ್ಲಿ ಒಂದಾದ ಗೆಣಸನ್ನು ಇಂದು ಹೊರ ತೆಗೆದು ನೋಡಿದಾಗ ಬೃಹದಾಕಾರವಾಗಿ ಬೆಳೆದು ಒಂದು ಮಗುವಿನ ರೂಪದಲ್ಲಿದೆ. ಮತ್ತೊಂದು ಗದೆ ರೂಪದಲ್ಲಿರುವುದು ಕಂಡು ಬಂತು. ಈ ಗೆಣಸು ಸುಮಾರು 13 ಕೆಜಿ ಬೆಳೆದಿದ್ದು ಯಾವುದೇ ರೀತಿಯ ಹಾನಿ ಸಹ ಹಾಗಿಲ್ಲ ಎಂಬುದು ಪ್ರಕೃತಿ ವಿಸ್ಮಯಕ್ಕೊಂದು ಕೈಗನ್ನಡಿಯಾಗಿದೆ. ಪ್ರತಿಷ್ಠಿತ ಬಡಾವಣೆಯ ಈ ವಿಸ್ಮಯ ವೀಕ್ಷಿಸಲು ಸಾರ್ವಜನಿಕರ ದಂಡೇ ಆಗಮಿಸುತ್ತಿದ್ದು ದೈವ ಕೃಪೆ ಎನ್ನಲಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin