ಮಗುವಿನ ಲಿಂಗ ಪರೀಕ್ಷೆ ಮಾಡಿಸಿ ವಿವಾದಕ್ಕೀಡಾದರೆ ಕರೀನಾ ಕಪೂರ್..?

ಈ ಸುದ್ದಿಯನ್ನು ಶೇರ್ ಮಾಡಿ

Kareena

ಬಾಲಿವುಡ್ ತಾರಾ ದಂಪತಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಗರ್ಭಿಣಿಯಾಗಿರುವ ತಮ್ಮ ಪತ್ನಿ ಕರೀನಾ ಮಗುವಿನ ಲಿಂಗ ಪತ್ತೆ (ಸೆಕ್ಸ್ ಡಿಟರ್‍ಮಿನೇಷನ್) ಪರೀಕ್ಷೆ ಮಾಡಿಸಿದ್ದಾರೆ. ಕರೀನಾ ಮಾಡಿದ್ದು ಸರೀನಾ? ಎಂಬ ಸುದ್ದಿಗಳು ಕೇಳಿ ಬಂದ ಬೆನ್ನಲ್ಲೇ ಈ ಆರೋಪಗಳನ್ನು ಸೈಫ್ ತಳ್ಳಿ ಹಾಕಿದ್ದಾನೆ. ಸೈಫ್ ಮತ್ತು ಕರೀನಾ ರಹಸ್ಯವಾಗಿ ವೈದ್ಯರನ್ನು ಸಂಪರ್ಕಿಸಿ ಜನಿಸಲಿರುವ ತಮ್ಮ ಮಗುವಿನ ಲಿಂಗ ಪತ್ತೆ ಮಾಡಿಸಿದ್ದಾರೆ. ಆ ಮೂಲಕ ಕಾನೂನು ಉಲ್ಲಂಘಿಸಿ ಅಪರಾಧ ಎಸಗಿದ್ದಾರೆ. ಲಂಡನ್‍ನಲ್ಲಿ ಕರೀನಾಗೆ ಹೆರಿಗೆಯಾಗಲಿದೆ. ಮಗುವಿಗೆ ಸೈಫೀನಾ (ಸೈಫ್ ಮತ್ತು ಕರೀನಾ ಇವರಿಬ್ಬರ ಹೆಸರುಗಳನ್ನು ಒಳಗೊಂಡ ಚುಟುಕು ನಾಮಧೇಯ) ಎಂದು ಹೆಸರಿಡಲಿದ್ದಾರೆ ಎಂಬಿತ್ಯಾದಿ ಗಾಸಿಪ್‍ಗಳು ಹಬ್ಬಿತ್ತು. ಈ ಪುಕಾರುಗಳನ್ನು ನಿರಾಕರಿಸಿ ಹೇಳಿಕೆ ನೀಡಿರುವ ಸೈಫ್, ನಾವು ಮಗುವಿನ ಲಿಂಗ ಪರೀಕ್ಷೆ ಮಾಡಿಸಿಲ್ಲ.

 

ಯಾವ ಮಗು ಜನಿಸಲಿದೆ ಎಂಬುದು ನಮಗೆ ಈಗಲೂ ಗೊತ್ತಿಲ್ಲ. ಲಂಡನ್‍ನಲ್ಲಿ ಹೆರಿಗೆಯ ಉದ್ದೇಶವನ್ನೂ ಹೊಂದಿಲ್ಲ ಹಾಗೂ ಮಗುವಿಗೆ ಸೈಫೀನಾ ಎಂದು ಹೆಸರಿಡುವುದಿಲ್ಲ. ಈ ಸುದ್ದಿಗಳೆಲ್ಲ ಶುದ್ಧ ಸುಳ್ಳು ಎಂದು ಸೈಫ್ ಹೇಳಿದ್ದಾನೆ. ತಾವು ಡಿಸೆಂಬರ್‍ನಲ್ಲಿ ಮೊದಲ ಕಂದನ ನಿರೀಕ್ಷೆಯಲ್ಲಿರುವುದಾಗಿ ಜುಲೈನಲ್ಲಿ ಸೈಫ್ ಘೋಷಿಸಿದ್ದ. 46 ವರ್ಷದ ಸೈಫ್‍ಗೆ ಕರೀನಾ ಕಫೂರ್ ಖಾನ್ ಎರಡನೇ ಪತ್ನಿ. ಈ ಹಿಂದೆ ಅಮೃತಾ ಸಿಂಗ್‍ರನ್ನು ವಿವಾಹವಾಗಿದ್ದ ಈ ನಟನಿಗೆ ಸಾರಾ ಎಂಬ ಪುತ್ರಿ ಮತ್ತು ಇಬ್ರಾಹಿಂ ಎಂಬ ಪುತ್ರ ಇದ್ದಾರೆ. ಕರೀನಾ ಕಪೂರ್ ಬೇಗಂಗೆ ಯಾವ ಮಗು ಜನಿಸಬಹುದು ಎಂಬ ಕುತೂಹಲವಂತೂ ಇದ್ದೇ ಇದೆ.

 

► Follow us on –  Facebook / Twitter  / Google+

Facebook Comments

Sri Raghav

Admin