ಮಚ್ಲಿ ಇಲ್ಲದ ಕೊರಗು ನೀಗಿಸುತ್ತಿದೆ ‘ಕಾಲರ್ ವಾಲಿ’ ಹೆಣ್ಣು ಹುಲಿ

ಈ ಸುದ್ದಿಯನ್ನು ಶೇರ್ ಮಾಡಿ

coller-wali

ಭೋಪಾಲ್, ಆ.26-ರಾಜಸ್ಥಾನದಲ್ಲಿ ಕಳೆದ ವಾರ ಮೃತಪಟ್ಟು ಪ್ರಾಣಿ ಪ್ರಿಯರಲ್ಲಿ ದುಃಖಕ್ಕೆ ಕಾರಣವಾಗಿದ್ದ ಭಾರತದ ಅತ್ಯಂತ ಪ್ರಸಿದ್ಧ ಹುಲಿ ಮಚ್ಲಿ ಸ್ಥಾನವನ್ನು ಇದೀಗ ಮಧ್ಯಪ್ರದೇಶದ ಕಾಲರ್ವಾಲಿ ಎಂಬ ಹೆಣ್ಣು ಹುಲಿ ತುಂಬುತ್ತಿದೆ. ಇದರಿಂದ ಮಚ್ಲಿ ಇಲ್ಲದ ಕೊರಗು ನಿವಾರಣೆಯಾದಂತಾಗಿದೆ. ಈಗ ಈ ವ್ಯಾಘ್ರಿಣಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಯಾವುದೇ ಕಾಲರ್ವಾಲಿ ಹುಲಿ? ಏಕೆ ಅದಕ್ಕೆ ಇಷ್ಟು ಪ್ರಾಮುಖ್ಯತೆ? ಎಂಬ ಪ್ರಶ್ನೆಗೆ ಸಮರ್ಥ ಉತ್ತರವೂ ಇದೆ. ಈ ಹುಲಿಗೆ ಟಿ-15 ಎಂಬ ಹೆಸರು ಇದ್ದರೂ, ಅದು ಪ್ರಸಿದ್ಧಿಯಾಗಿರುವುದು ಕಾಲರ್ವಾಲಿ ಎಂಬ ಹೆಸರಿನಿಂದಲೇ.   ವ್ಯಾಘ್ರಗಳ ಜಾಡು ಪತ್ತೆ ಹಚ್ಚಲು ರೆಡಿಯೋ ಕಾಲರನ್ನು ಪ್ರಥಮವಾಗಿ ಅಳವಡಿಸಲಾದ ಹೆಣ್ಣು ಹುಲಿ ಎಂಬ ಹೆಗ್ಗಳಿಕೆ ಇದರದು. ಇದರ ಹೆಸರುವಾಸಿ ಇಷ್ಟಕ್ಕೆ ಸೀಮಿತವಾಗಿಲ್ಲ. ಮಧ್ಯಪ್ರದೇಶದ ಪೆಂಚ್ ಹುಲಿ ಧಾಮದಲ್ಲಿ (ಪಿಟಿಆರ್)2008ರಿಂದ ಈವರೆಗೆ 22 ಮರಿಗಳ ಹೆತ್ತ ಮಹಾತಾಯಿ ಎಂಬ ಕೀರ್ತಿಯೂ ಈ ಹುಲಿಗೇ ಸೇರುತ್ತದೆ.

ರಾಯಲ್ ಬೆಂಗಲ್ ಹುಲಿ ಟಿ-15, ಕಾಲರ್ವಾಲಿ (ಕೊರಳಪಟ್ಟಿ ಇರುವ) ಹುಲಿ ಎಂದೇ ಜನಪ್ರಿಯವಾಗಿದೆ. 2008ರಿಂದ ಆರು ಪ್ರತ್ಯೇಕ ಹೆರಿಗೆಗಳಲ್ಲಿ ಒಟ್ಟು 22 ಮರಿಗಳನ್ನು ಹಾಕಿದೆ. ಇಷ್ಟು ಸಂಖ್ಯೆಯ ಮರಿಗಳನ್ನು ಹುಲಿಯೊಂಣದು ಹಾಕಿರುವುದು ಜಗತ್ತಿನಲ್ಲಿ ಎಲ್ಲೂ ಕಂಡುಬಂದಿಲ್ಲ ಎಂದು ಪಿಟಿಆರ್ನ ಕ್ಷೇತ್ರ ನಿರ್ದೇಶಕ ಸುಭರಾಜನ್ ಹೇಳಿದ್ದಾರೆ. ಮಧ್ಯಪ್ರದೇಶದ ಸಿಯೋನಿ ಮತ್ತು ಚಿಂಡ್ವಾರ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಿಟಿಆರ್ ಹುಲಿಧಾಮದಲ್ಲಿ 49 ಹುಲಿಗಳಿದ್ದು, ಅವುಗಳಲ್ಲಿ ಈ ಹುಲಿ ಎಲ್ಲರ ಗಮನ ಸೆಳೆಯುತ್ತಿದೆ.  ಭಾರತದ ಅತ್ಯಂತ ಜನಪ್ರಿಯ ಮತ್ತು ಅತ್ಯಧಿಕ ಸಂಖ್ಯೆಯಲ್ಲಿ ಛಾಯಾಚಿತ್ರಗಳನ್ನು ತೆಗೆಯಲ್ಪಟ್ಟ ಮಚ್ಲಿ ಹೆಣ್ಣುಲಿ ಕಳೆದ ವಾರ ಅಸುನೀಗಿ ಪ್ರಾಣಿಪ್ರಿಯರಲ್ಲಿ ದುಃಖ ಉಂಟು ಮಾಡಿತು. ಈಗ ಆ ಕೊರಗು ಕಾಲರ್ವಾಲಿ ಮೂಲಕ ನಿವಾರಣೆಯಾಗಿದೆ.  ಈ ಹುಲಿಯನ್ನು ನೋಡಲು ಅಸಂಖ್ಯಾತ ಪ್ರವಾಸಿಗರು ತಂಡೋಪತಂಡವಾಗಿ ಮಧ್ಯಪ್ರದೇಶದ ಪಿಟಿಆರ್ನತ್ತ ಧಾವಿಸುತ್ತಿದ್ದು, ಇದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

Facebook Comments

Sri Raghav

Admin