ಮಠಗಳಿಂದ ಸಂಸ್ಕೃತಿ ಬೆಳೆದಿದೆ : ಹೆಚ್.ಡಿ.ದೇವೆಗೌಡರು 

ಈ ಸುದ್ದಿಯನ್ನು ಶೇರ್ ಮಾಡಿ

devegowda

ದಾಬಸ್‍ಪೇಟೆ, ಮಾ.13-ಮಠ ಮಾನ್ಯಗಳು ನಮ್ಮ ದೇಶದಲ್ಲಿರುವುದರಿಂದ ನಮ್ಮ ಸಂಸ್ಕೃತಿ ಅಗಾಧವಾಗಿ ಬೆಳೆದಿದೆ ಎಂದು ಮಾಜಿ ಪ್ರಧಾನ ಮಂತ್ರಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೆಗೌಡರು ತಿಳಿಸಿದರು.ವನಕಲ್ಲು ಮಠದಲ್ಲಿ ವನಕಲ್ಲು ಮಲ್ಲೇಶ್ವರ ಭ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿ ಹಾಗೂ ಅನಾಥ ಆಶ್ರಮದ ವಿಕಾಸ ಮಂದಿರದ ಬೆಳ್ಳಿಹಬ್ಬದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಸಂಸ್ಕೃತಿ ಯಲ್ಲಿ ಅದರಲ್ಲೂ ಕರ್ನಾಟಕ ರಾಜ್ಯದಲ್ಲಿರುವ ಮಠ ಮಾನ್ಯಗಳು ವಿದ್ಯಾಭ್ಯಾಸ, ವಸತಿ ಹಾಗೂ ವಿದ್ಯಾರ್ಥಿಗಳಿಗೆ ಬೇಕಾಗುವ ಸಲಕರಣೆಗಳನ್ನು ನೀಡಿ ಅನಾಥ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅಹಾಯ ಮಾಡಿ ಉತ್ತಮ ವಿದ್ಯಾರ್ಥಿಯಾಗಲು ಸಹಕರಿಸುತ್ತಿವೆ ಎಂದರು.  ವನಕಲ್ಲು ಮಠ ಸುಮಾರು ಐದು ವರ್ಷಗಳಲ್ಲಿ 155 ಅನಾಥ ಮಕ್ಕಳಿಗೆ ವಸತಿ ಮತ್ತು ಊಟವನ್ನು ಹಾಗೂ ವೃದ್ಧಾಶ್ರಮವನ್ನು ನಡೆಸುತ್ತಿದ್ದು ಈ ಭಾಗದ ಜನರು ಅವರಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಬರಗಾಲದ ಪರಿಸ್ಥಿತಿಯಲ್ಲಿ ನೆಲಮಂಗಲ ಶಾಸಕರಾದ 7 ಟನ್ ಹುಲ್ಲನ್ನು ರೈತರಿಗೆ ಉಚಿತವಾಗಿ ಇಂದೂ ನನ್ನ ಕೈಯಲ್ಲೇ ವಿತರಿಸಿದ್ದಾರೆ. ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ ಸರ್ಕಾರ ಮಾಡಲಾಗದ ಕೆಲಸಗಳನ್ನು ಮಠ ಮಾನ್ಯಗಳು ಮಾಡುತ್ತಿವೆ. ಸ್ವಾಮೀಜಿಗಳು ಭಕ್ತರಿಂದ ಮಠಕ್ಕೆ ಬೇಕಾಗುವ ಸಹಾಯ ಪಡೆಯುತ್ತೇವೆ. ಯಾವ ಜಾತಿ ಧರ್ಮ ಕೇಳದೆ ಅನಾಥ ಮಕ್ಕಳನ್ನು ಸಾಕುವಂತಹ ಕೆಲಸ ಮಾಡುತ್ತಿವೆ. ಮಾತೃ ಭಾಷೆಯನ್ನು ಉಳಿಸುವ ಕೆಲಸಗಳನ್ನು ಮಠಗಳು ಮಾಡುತ್ತಿವೆ ಎಂದರು.ಮೇಲಣಗವಿ ಮಠದ ಮಲಯಶಾಂತಮುನಿ ಸ್ವಾಮೀಜಿ, ವನಕಲ್ಲು ಮಠದ ಬಸವರಮಾನಂದ ಸ್ವಾಮೀಜಿ, ಮಾಜಿ ಸಚಿವ ಚನ್ನಿಗಪ್ಪ, ವಿಧಾನ ಪರಿಷತ್ ಸದಸ್ಯ ಕಾಂತರಾಜು, ಮಾಜಿ ವಿಧಾನ ಪರಿಷತ್ ಸದಸ್ಯ ಈ ಕೃಷ್ಣಪ್ಪ ಮಾತನಾಡಿದರು.

ಜೆಡಿಎಸ್ ಅಧ್ಯಕ್ಷ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ತೀರ್ಥಪ್ರಸಾದ್, ಜಿ.ಪಂ.ಮಾಜಿ ಸದಸ್ಯ ರಾಜು, ಹೊನ್ನಸಿದ್ದಪ್ಪ, ತಾ.ಪಂ.ಸದಸ್ಯ ನಾಗಭೂಷಣ್, ಸಿದ್ದಗಂಗಮ್ಮ ತಮ್ಮಯ್ಯ, ಪುರಸಭೆ ಅಧ್ಯಕ್ಷೆ  ಸುಜಾತ ಪ್ರಕಾಶ್, ಜಿ.ಪಂ.ಸದಸ್ಯರಾದ ಪುಟ್ಟಮ್ಮ ಅರ್ಜುನ್, ಸಾರಿಗೆ ಇಲಖೆ ನಾಗೇಶ್ ಕುಮಾರ್, ವಿಎಸ್ ಎಸ್ ಎನ್ ಅಧ್ಯಕ್ಷ  ಜಿ ವೆಂಕಟೇಶ್, ಎಪಿಎಂಸಿ ಸದಸ್ಯ ಗಂಗಣ್ಣ, ಗ್ರಾ.ಪಂ.ಸದಸ್ಯ ರಾಮಾಂಜಿನಯ್ಯ, ಪುರುಶೋತ್ತಮ್, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin