ಮಡಗಾಸ್ಕರ್‍ನಲ್ಲಿ ವಿನಾಶಕಾರಿ ಚಂಡಮಾರುತಕ್ಕೆ 50 ಸಾವು, ಸಂಕಷ್ಟದಲ್ಲಿ 1.76 ಲಕ್ಷ ಮಂದಿ

ಈ ಸುದ್ದಿಯನ್ನು ಶೇರ್ ಮಾಡಿ

Madagascar-1
ಅನಲಮಂಗಾ (ಮಡಗಾಸ್ಕರ್), ಮಾ.12- ಮಡಗಾಸ್ಕರ್‍ನಲ್ಲಿ ವಿನಾಶಕಾರಿ ಚಂಡಮಾರುತದಿಂದ 50ಕ್ಕೂ ಹೆಚ್ಚು ಮಂದಿ ಬಲಿಯಾಗಿ, 1.76 ಲಕ್ಷ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೈಸರ್ಗಿಕ ದುರಂತದಿಂದ ಸಾವಿರಾರು ನಿರಾಶ್ರಿತರು ತುರ್ತು ತಾಣಗಳಲ್ಲಿ ಆಶ್ರಯ ಪಡೆದಿದ್ದಾರೆ.   ಮಡಗಾಸ್ಕರ್‍ನ ಈಶಾನ್ಯ ಭಾಗದ ಮೇಲೆ ಅಪ್ಪಳಿಸಿದ ಎನಾವೋ ಹೆಸರಿನ ಚಂಡಮಾರುತದಿಂದ ಆ ಪ್ರದೇಶ ಅಲ್ಲೋಲ-ಕಲ್ಲೋಲವಾಗಿದೆ ಎಂದು ನೈಸರ್ಗಿಕ ದುರಂತ ನಿರ್ವಹಣಾ ಸಂಸ್ಥೆ-ಬಿಎನ್‍ಜಿಆರ್‍ಸಿ ಮುಖ್ಯಸ್ಥ ಥಿಯರಿ ವೆಂಟಿ ಹೇಳಿದ್ದಾರೆ.

Madagascar-2

ಭೀಕರ ಚಂಡಮಾರುತದ ರುದ್ರನರ್ತನಕ್ಕೆ 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸುಮಾರು 200 ಜನ ಗಾಯಗೊಂಡಿದ್ದಾರೆ. 53,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ರಾಜಧಾನಿ ಅಂಟಾನನರಿವೋ ನಗರವೊಂದರಲ್ಲೇ 32,000 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಚಂಡಮಾರುತ ಸಂತ್ರಸ್ತರಿಗಾಗಿ 137 ತುರ್ತು ಆಶ್ರಯ ತಾಣಗಳನ್ನು ಸ್ಥಾಪಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Madagascar-3

Facebook Comments

Sri Raghav

Admin