ಮಡದಿ ಮಾತು ಕೇಳಬೇಕೆ? ಹರಟೆ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

13

ಬೆಳಗಾವಿ,ಅ.1- ನಾಡಹಬ್ಬದ 89ನೇ ಉತ್ಸವ ಕಾರ್ಯಕ್ರಮದಲ್ಲಿ ನಾಳೆ ಸಾಯಂಕಾಲ 6 ಗಂಟೆಗೆ ಸಾಹಿತ್ಯ ಭವನದ ಹೊರ ಆವರಣದಲ್ಲಿ ನಿರ್ಮಿಸಿರುವ ಸುಸಜ್ಜಿತ ವೇದಿಕೆಯಲ್ಲಿ ಮಡದಿ ಮಾತು ಕೇಳಬೇಕೆ? ಎಂಬ ವಿನೂತನ ರೀತಿ ಹರಟೆ ಕಾರ್ಯಕ್ರಮವೊಂದನ್ನು ನಗರದ ಹಾಸ್ಯಕೂಟ ಸಂಘಟನೆಯವರು ನೀಡಲಿದ್ದಾರೆ.ಹರಟೆ ಕಾರ್ಯಕ್ರಮದ ಸೂತ್ರದಾರರಾಗಿ ಖ್ಯಾತ ನಗೆಮಾತುಗಾರ, ಅಂಕಣ ಬರಹಗಾರ ಬೆಂಗಳೂರಿನ ಎನ್. ರಾಮನಾಥ ಕಾರ್ಯ ನಿರ್ವಹಿಸಲಿದ್ದಾರೆ. ಗುಂಡೇನಟ್ಟಿ ಮಧುಕರ, ಬೈಲಹೊಂಗಲದ ಎಂ.ಬಿ. ಹೊಸಳ್ಳಿ, ಖಾನಾಪುರದ ಆನಂದ ಭಿಂಗೆ ಹಾಗೂ ವೇಣುಧ್ವನಿಯ ಸರ್ವಮಂಗಳಾ ಅರಳಿಮಟ್ಟಿ ಅವರು ಮಡದಿ ಮಾತನ್ನು ಕೇಳಬೇಕೆನ್ನುವ ಮಡಿವಂತರು. ಇನ್ನೂ ಪ್ರೊ . ಜಿ.ಕೆ. ಕುಲಕರ್ಣಿ, ಅಶೋಕ ಮಳಗಲಿ, ಜಿ.ಎಸ್. ಸೋನಾರ ಹಾಗೂ ಪ್ರೊ . ವಿಜಯಲಕ್ಷ್ಮಿ ಎಂ. ಪುಟ್ಟಿ ಮಡದಿ ಮಾತನ್ನು ಕೇಳಲೇಬಾರದೆಂಬ ವಾದ ಮಂಡಿಸಲಿರುವ ಧೈರ್ಯವಂತರು.ತಮ್ಮ ತಮ್ಮ ಮಡದಿಯರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿ ಕಲಾವಿದರನ್ನು ಪ್ರೊ ತ್ಸಾಹಿಸಬೇಕೆಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin