ಮಡಿಕೇರಿಯಲ್ಲಿ ಕಾಣಿಸಿಕೊಂಡ ಶಸ್ತ್ರ ಸಜ್ಜಿತ ನಕ್ಸಲೀಯರು

ಈ ಸುದ್ದಿಯನ್ನು ಶೇರ್ ಮಾಡಿ

Maoists

ಮಡಿಕೇರಿ, ನ.24- ಮಡಿಕೇರಿಯಲ್ಲಿ ಶಸ್ತ್ರ ಸಜ್ಜಿತ ನಕ್ಸಲೀಯರು ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ.ಮಡಿಕೇರಿ ತಾಲೂಕು ಭಾಗಮಂಡಲ ಸಮೀಪದ ತಾವೂರು, ಕುಂದಚೇರಿ ಬಳಿ ಓರ್ವ ಮಹಿಳೆ, ಮೂವರು ಪುರುಷರಿದ್ದ ಮಾವೋವಾದಿಗಳ ತಂಡ ಶಸ್ತ್ರ ಸಜ್ಜಿತವಾಗಿ ಓಡಾಡುತ್ತಿರುವುದನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ. ಕೂಡಲೇ ಸ್ಥಳಕ್ಕೆ ದಾವಿಸಿರುವ ಪೊಲೀಸರು ಗ್ರಾಮಸ್ಥರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿ ನಕ್ಸಲರ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಪಶ್ಚಿಮಘಟ್ಟ ಮಲೆನಾಡು ಪ್ರದೇಶದಲ್ಲಿ ನಕ್ಸಲರ ಪ್ರಾಬಲ್ಯ ಕ್ಷೀಣಿಸಿದ್ದು, ಹಲವು ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈಗ ಮಡಿಕೇರಿಯಲ್ಲಿ ಇದ್ದಕ್ಕಿದ್ದಂತೆ ಶಸ್ತ್ರ ಸಜ್ಜಿತ ನಕ್ಸಲರು ಕಂಡುಬಂದಿರುವುದು ಗಾಬರಿ ಹುಟ್ಟಿಸಿದೆ. ಖಚಿತ ಮಾಹಿತಿ ಇಲ್ಲ: ಮಡಿಕೇರಿಯಲ್ಲಿ ನಕ್ಸಲೀಯರ ಓಡಾಟದ ಬಗ್ಗೆ ಖಚಿತ ಮಾಹಿತಿ ಇಲ್ಲ. 10 ವರ್ಷದ ಬಾಲಕನ ಹೇಳಿಕೆಯಿಂದ ಸುದ್ದಿ ಹಬ್ಬಿದೆ. ನಕ್ಸಲೀಯರ ಆಗಮನದ ಚಲನ-ವಲನದ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ. ಬಾಲಕ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ ಎಂದು ಮಡಿಕೇರಿ ಡಿವೈಎಸ್‍ಪಿ ಛಬ್ಬಿ ತಿಳಿಸಿದ್ದಾರೆ. ಯಾವುದೇ ಗೊಂದಲಕ್ಕೆ ಒಳಗಾಗದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

 

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin