ಮಣಿಪುರದಲ್ಲಿ ಬಸ್ ಕಾಲುವೆಗೆ ಬಿದ್ದು 12 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

B-us-Accidnet

ಇಂಫಾಲ್, ಮಾ.27-ಬಸ್ ಕಾಲುವೆ ಉರುಳಿ ಬಿದ್ದು ಕನಿಷ್ಠ 12 ಮಂದಿ ಮೃತಪಟ್ಟು, ಇತರೆ 23 ಜನರು ಗಾಯಗೊಂಡಿರುವ ಘಟನೆ ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ಇಂದು ನಸುಕಿನಲ್ಲಿ ಸಂಭವಿಸಿದೆ.   ಮಣಿಪುರ-ದಿಮಾಪುರ ರಾಷ್ಟ್ರೀಯ ಹೆದ್ದಾರಿ 39ರ ಮಕನ್ ಮತ್ತು ಚಾಕುಮೈ ಪ್ರದೇಶದ ನಡುವೆ ಮುಂಜಾನೆ 3.30ರಲ್ಲಿ ಈ ದುರಂತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜಧಾನಿ ಇಂಫಾಲ್‍ನಿಂದ 65 ಕಿ.ಮೀ. ದೂರದಲ್ಲಿ ಈ ಪ್ರದೇಶವಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಕಾಲುವೆಗೆ ಉರುಳಿ ಬಿತ್ತು. ಈ ದುರಂತದಲ್ಲಿ 12 ಮಂದಿ ಮೃತರಾದರು. ಗಾಯಾಳುಗಳನ್ನು ಅಸ್ಸಾಂ ರೈಫಲ್ಸ್ ಮರಮ್ ಹಾಸ್ಪಿಟಲ್ ಮತ್ತು ಇತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin