ಮತದಾನದ ವೇಳೆ ಶಾಸಕರ ಕಾಲೆಳೆದು ಕಾಮಿಡಿ ಮಾಡಿದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಮಾ.23-ಏನ್ರೀ… ನಿಮ್ದು, ಯಡಿಯೂರಪ್ಪಂದು ಇತ್ತೀಚೆಗೆ ಲವ್ ಜಾಸ್ತಿಯಾಗಿದೇಯೇನ್ರೀ… ನಿಮ್ಮ ಬಗ್ಗೇನೇ ಜಾಸ್ತಿ ಮಾತಾಡ್ತಾರಲ್ರೀ ಯಡಿಯೂರಪ್ಪ… ಎಂ.ಬಿ.ಪಾಟೀಲ್‍ರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಛೇಡಿಸಿದ ಪರಿ ಹೀಗಿತ್ತು. ರಾಜ್ಯಸಭೆ ಚುನಾವಣೆಗೂ ಮುನ್ನ ನಡೆದ ಸಿಎಲ್‍ಪಿ ಸಭೆಯ ನಂತರ ಡಿ.ಕೆ.ಶಿವಕುಮಾರ್ ಕಚೇರಿಯಲ್ಲಿ ಕುಳಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವು ಸಚಿವರು, ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಎಂ.ಬಿ.ಪಾಟೀಲ್ ಅವರನ್ನು ಕೆಣಕಿ, ಏನ್ರೀ ಪಾಟೀಲ್ರೇ… ನಿಮ್ದು ಯಡಿಯೂರಪ್ಪನದು ಲವ್ ಜಾಸ್ತಿಯಾದಂತಿದೆ ಎಂದು ಹೇಳಿದರು.

ಲವ್‍ಗಿವ್ ಏನೂ ಇಲ್ಲ ಸಾಹೇಬ್ರೇ… ಅವರಿಗೆ ಹುಚ್ ಹಿಡಿದೈತಿ ಅದಕ್ಕೆ ಹಾಂಗ್ ಮಾತಾಡಕ್ಕಾತ್ತಾರೆ… ಏನ್ ಹುಚ್ ರ್ರೀ… ಅವರು ಸಿಎಂ ಆಗಿದ್ದವರಲ್ವೇನ್ರೀ ಅವರೇನ್ ಪೆದ್ದ ಏನ್ರೀ… ಎಂದು ಹೇಳಿದರು. ಪೆದ್ದ ಅಲ್ಲ ಸರ್… ಜೋಕರ್ ಎಂದರು. ಆಗ ಅಲ್ಲಿದ್ದ ಶಾಸಕ ನಾಗೇಂದ್ರ ಅವರು ಸರ್…. ಇಲ್ಲಿ ಮೀಡಿಯಾದವ್ರಿದ್ದಾರೆ, ಮೆಲ್ಲಗ್ ಮಾತಾಡ್ರೀ… ಎಂದರು. ಅಯ್ಯೋ… ಇರಲಿ ಬಿಡ್ರಿ… ಅವರಿದಾರೇ ಅಂತಲೇ ನಾನ್ ಮಾತಾಡ್ತಿರೋದು. ಕೇಳ್ಸಿಕೊಳ್ಳಿ ಬಿಡ್ರೀ ಎಂದು ಕಿಚಾಯಿಸಿದರು.

ಆಯ್ತು… ಎಲ್ಲ ವೋಟ್ ಹಾಕ್ಸಿದಿರಾ ಎಂದು ಸಿಎಂ ಕೇಳಿದರು. ಅದೇ ರೀತಿ ಅಲ್ಲಿ ಬಂದ ಶಾಸಕರು, ಸಚಿವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಿದರು. ಚುನಾವಣಾ ಸಂಬಂಧ ಚರ್ಚೆ ನಡೆಸಿದರು.  ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮುಂತಾದ ಹಿರಿಯ ಸಚಿವರ ಜೊತೆ ಮಾತುಕತೆಯಲ್ಲಿ ತೊಡಗಿದರು.

Facebook Comments

Sri Raghav

Admin