ಮತ್ತಷ್ಟು ಸಂಕಷ್ಟಗಳ ಸುಳಿಯಲ್ಲಿ ಕುಲಭೂಷಣ್ ಜಾಧವ್

ಈ ಸುದ್ದಿಯನ್ನು ಶೇರ್ ಮಾಡಿ

jadav

ಇಸ್ಲಾಮಾಬಾದ್, ಫೆ.6-ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಈಗಾಗಲೇ ಮರಣದಂಡನೆಗೆ ಗುರಿಯಾಗಿರುವ ಭಾರತದ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್ ಈಗ ಮತ್ತಷ್ಟು ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದ್ದಾರೆ. ನೇಣುಗಂಭದ ಕರಾಳ ಛಾಯೆಯಲ್ಲಿರುವ ಯಾದವ್ ಈಗ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಸಂಬಂಧಪಟ್ಟ ಅನೇಕ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಇರಾನ್‍ನಿಂದ ಮಾರ್ಚ್ 3, 2016ರಂದು ಬಲೂಚಿಸ್ತಾನ ಪ್ರಾಂತ್ಯ ಪ್ರವೇಶಿಸಿದ 47 ವರ್ಷದ ಯಾದವ್‍ರನ್ನು ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನ ಪೊಲೀಸರು ಬಂಧಿಸಿದ್ದರು. ನಂತರ ವಿಚಾರಣೆ ನಡೆಸಿದ ಮಿಲಿಟರಿ ಕೋರ್ಟ್ ಕಳೆದ ವರ್ಷ ಏಪ್ರಿಲ್‍ನಲ್ಲಿ ಮರಣದಂಡನೆ ವಿಧಿಸಿತ್ತು.

ಪಾಕಿಸ್ತಾನದ ಎಲ್ಲ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿರುವ ಭಾರತ ತೀರ್ಪಿನ ವಿರುದ್ಧ ಕಳೆದ ವರ್ಷ ಮೇನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಭಾರತದ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಅಂತಿಮ ವಿಚಾರಣೆ ಕಾಯ್ದಿರಿಸಿ ಜಾಧವ್ ಗಲ್ಲು ಶಿಕ್ಷೆಗೆ ತಡೆಯಾe್ಞÉ ನೀಡಿತ್ತು.
ಆದರೆ, ಪಾಕಿಸ್ತಾನವು ಜಾಧವ್ ವಿರುದ್ಧ ಭಯೋತ್ಪಾದನೆ ಮತ್ತು ಬುಡಮೇಲು ಕೃತ್ಯಗಳ ಸಂಬಂಧ ಅನೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಅವು ಪ್ರಗತಿಯಲ್ಲಿದೆ. ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಏನೇ ಇದ್ದರೂ, ಈ ಪ್ರಕರಣಗಳಲ್ಲಿ ಜಾಧವ್‍ರನ್ನು ಶಿಕ್ಷೆಗೆ ಗುರಿಪಡಿಸುವುದು ಇದರ ಉದ್ದೇಶವಾಗಿದೆ.

Facebook Comments

Sri Raghav

Admin