ಮತ್ತಿಕೆರೆ ಫ್ಲೈಓವರ್ ಮೇಲ್ಸೇತುವೆ ಕಾಮಗಾರಿ : ಸಂಚಾರದಲ್ಲಿ ಬದಲಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

mattikere--flyover
ಬೆಂಗಳೂರು, ನ.2- ಯಶವಂತಪುರ ಮತ್ತು ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಒಳಪಡುವ ಎಚ್‍ಎಂಟಿ ಮುಖ್ಯರಸ್ತೆಯ ಮತ್ತಿಕೆರೆ ಫ್ಲೈಓವರ್ (ಮೇಲ್ಸೇತುವೆ) ಕಾಮಗಾರಿ ನಡೆಯುತ್ತಿರುವುದರಿಂದ ಈ ವ್ಯಾಪ್ತಿಯಲ್ಲಿ ನಾಳೆಯಿಂದ (ನ.3)30ವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.ಯಶವಂತಪುರ, ಸಿ.ವಿ.ರಾಮನ್ ರಸ್ತೆ, ಎಚ್‍ಎಂಟಿ ಮುಖ್ಯರಸ್ತೆ ಮಾರ್ಗವಾಗಿ ಬಿಇಎಲ್ ವೃತ್ತದವರೆಗೆ ಮತ್ತು ಯಶವಂತಪುರ ಕಡೆಯಿಂದ ಬಿಇಎಲ್ ಮತ್ತು ವಿದ್ಯಾರಣ್ಯಪುರ, ಯಲಹಂಕ ಕಡೆಗೆ ಸಂಚರಿಸುವ ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಖಾಸಗಿ ಬಸ್‍ಗಳು, ಲಾರಿ, ಟ್ರಕ್ ಮತ್ತು ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಯಶವಂತಪುರ ವೃತ್ತದಿಂದ ಸಿ.ವಿ.ರಾಮನ್ ರಸ್ತೆ ಮಾರ್ಗವಾಗಿ ಬಿಎಚ್‍ಇಎಲ್ ವೃತ್ತದಲ್ಲಿ ಎಡ ತಿರುವು ಪಡೆದು ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್‍ನಲ್ಲಿ ಮತ್ತೆ ಎಡತಿರುವು ಪಡೆದು ನ್ಯೂ ಬಿಇಎಲ್ ರಸ್ತೆ ಮುಖಾಂತರ ಕುವೆಂಪು ವೃತ್ತ ತಲುಪಿ ಎಡ ತಿರುವು ಪಡೆದು ಬಿಇಎಲ್ ವೃತ್ತಕ್ಕೆ ಸಂಚರಿಸಬಹುದಾಗಿದೆ.ಯಶವಂತಪುರದಿಂದ ಮತ್ತಿಕೆರೆ ಮಾರ್ಗವಾಗಿ ಬಿಇಎಲ್ ವೃತ್ತದ ಕಡೆಗೆ ಸಂಚರಿಸುವ ಲಘು ವಾಹನಗಳು ಮತ್ತಿಕೆರೆ ಕ್ರಾಸ್ ಬಳಿ ಎಡತಿರುವು ಪಡೆದು ಎಚ್‍ಎಂಟಿ ರಸ್ತೆ ಮುಖಾಂತರ ಮತ್ತಿಕೆರೆ ಬಸ್ ನಿಲ್ದಾಣದಲ್ಲಿ ಎಡತಿರುವು ಪಡೆದು ಚೌಡೇಶ್ವರಿ ಬಸ್ ನಿಲ್ದಾಣದಲ್ಲಿ ಬಲ ತಿರುವು ಪಡೆದು ಶಂಕರ್‍ನಾಗ್ ರೈಲ್ವೇ ಗೇಟ್ ಮುಖಾಂತರ ಮುತ್ಯಾಲನಗರ ಹಾಗೂ ಎಂಇಎಸ್ ರಿಂಗ್ ರಸ್ತೆಯಲ್ಲಿ ಬಲ ತಿರುವು ಪಡೆದು ಸಂಚರಿಸಬಹುದಾಗಿದೆ.ಜಾಲಹಳ್ಳಿ ಸಂಚಾರಿ ಠಾಣಾ ವ್ಯಾಪ್ತಿಯ ಬಿಇಎಲ್ ವೃತ್ತದ ಕಡೆಯಿಂದ ಮತ್ತಿಕೆರೆ, ಯಶವಂತಪುರ ಕಡೆಗೆ ಸಂಚರಿಸುವ ಎಲ್ಲಾ ಮಾದರಿ ವಾಹನಗಳು ಯಥಾಸ್ಥಿತಿಯಲ್ಲಿ ಸಂಚರಿಸಬಹುದಾಗಿದೆ ಎಂದು ಸಂಚಾರ ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin