ಮತ್ತೆ ಒಂದಾಗಲಿದ್ದಾರೆ ಕಿಚ್ಚ ಸುದೀಪ್-ಪ್ರಿಯಾ ದಂಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

Sudeep-01

ಬೆಂಗಳೂರು, ಜ.9-ಕಿಚ್ಚ ಸುದೀಪ್ ತಮ್ಮ ಕೌಟುಂಬಿಕ ಕಲಹ ಬಗೆಹರಿಸಿಕೊಂಡು ಪತ್ನಿಯೊಂದಿಗೆ ಸಹಬಾಳ್ವೆ ನಡೆಸಲು ಮುಂದಾಗಿದ್ದಾರೆ. ನ್ಯಾಯಾಲಯದ ಮೆಟ್ಟಿಲೇರಿದ್ದ ಕುಟುಂಬದ ಕಲಹದಿಂದ ಹೊರಬಂದು ಜೊತೆ ಜೊತೆಯಾಗಿ ಬಾಳಲು ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಎರಡೂ ಕುಟುಂಬದ ನಡುವೆ ಹರ್ಷ ತಂದಿರುವುದಲ್ಲದೆ, ಕಿಚ್ಚ ಅಭಿಮಾನಿಗಳಲ್ಲಿ ಸಂತಸ ಮೂಡಿದೆ ಎಂದು ಹೇಳಲಾಗಿದೆ. ಕಿಚ್ಚ ಸುದೀಪ್ ಅವರ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮಾ.9ಕ್ಕೆ ಮುಂದೂಡಿದೆ.
ನಟ ಕಿಚ್ಚ ಸುದೀಪ್, ಪತ್ನಿ ಪ್ರಿಯಾಯೊಂದಿಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದಾಗಿನಿಂದಲೂ ಕೋರ್ಟ್‍ಗೆ ಹಾಜರಾಗಿರಲಿಲ್ಲ. ಈಗ ಎರಡು ತಿಂಗಳ ಕಾಲಾವಕಾಶ ಕೋರಿ ಈ ಕೋರ್ಟ್‍ಗೆ ಮನವಿ ಮಾಡಿದ್ದಾರೆ.

ಕೋರ್ಟ್ ಮುಂದೆ ಇಬ್ಬರೂ ಹಾಜರಾಗುವಂತೆ ಸೂಚಿಸಿದ್ದು, ಮಾ.9ಕ್ಕೆ ವಿಚಾರಣೆ ಮುಂದೂಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಈ ಜೋಡಿ ಬೇರೆಯಾಗುವ ಲಕ್ಷಣಗಳಿಲ್ಲ. ಮತ್ತೆ ಒಂದೇ ಬಾಳುವ ಎಲ್ಲಾ ಸಾಧ್ಯತೆ ಇದೆ. ಒಂದಾಗಿ ಬಾಳಬೇಕೆಂಬುದು ಎಲ್ಲರ ಹಂಬಲವೂ ಆಗಿದೆ. ಮುಂದೇನಾಗುತ್ತಾದೆಯೋ ಕಾದು ನೋಡಬೇಕು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin