ಮತ್ತೆ ಖಾಕಿ ಧರಿಸಲು ಅನುಪಮಾ ಶೆಣೈ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Anupama-shenoy

ಮಂಗಳೂರು, ಸೆ.18-ಕೂಡ್ಲಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದ ನಿರ್ಧಾರದಲ್ಲಿ ಯುಟರ್ನ್ ತೆಗೆದುಕೊಳ್ಳುವುದರೊಂದಿಗೆ ಮತ್ತೆ ಖಾಕಿ ಧರಿಸಲು ನಿರ್ಧರಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಹಿಂಪಡೆಯುವ ಕುರಿತಂತೆ ಆ.29ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ನಂತರ ಮುಖ್ಯಮಂತ್ರಿಯವರು ಈ ವಿಷಯ ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು ಅವರು ಹೇಳಿದರು. ಪೊಲೀಸ್ ಇಲಾಖೆಯ ಕೆಲವೊಂದು ಲೋಪದೋಷಗಳನ್ನು ಮುಖ್ಯಮಂತ್ರಿಗಳೊಂದಿಗೆ ಅರ್ಥೈಸಲು ಪ್ರಯತ್ನಿಸಿದ್ದೇನೆ. ಮುಖ್ಯಮಂತ್ರಿಗಳ ಕಾರ್ಯವೈಖರಿಯ ಸಂದರ್ಭದಲ್ಲಿ ಏನೆಲ್ಲಾ ಸವಾಲುಗಳನ್ನು ಎದುರಿಸಬೇಕು ಎಂಬಂತೆ ಅವರು ಕೂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜೀನಾಮೆ ಹಿಂಪಡೆಯುವ ಬಗ್ಗೆ ಪತ್ರ ಬರೆದು ಒಂದು ತಿಂಗಳಾದರೂ ಅದು ಇತ್ಯರ್ಥಗೊಂಡಿಲ್ಲ. ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದಾಗ ನೋಡೋಣ ಎಂಬ ಉತ್ತರ ಸಿಕ್ಕಿತ್ತು.
ಆಗ ನಾನು ನೀಡಿದ್ದ ರಾಜೀನಾಮೆ ತೀರ್ಮಾನವನ್ನು ಹೆಚ್ಚಿನ ಜನರು ಮೆಚ್ಚಿಕೊಂಡಿಲ್ಲ. ಇದಕ್ಕೆ ಜನರಿಂದ ಆಕ್ಷೇಪಗಳು ಬಂದಿದ್ದವು. ಆದ್ದರಿಂದ ನನ್ನ ರಾಜೀನಾಮೆ ನಿರ್ಧಾರವನ್ನು ಬದಲಾಯಿಸಿದ್ದೇನೆ ಎಂದು ಅನುಪಮಾ ಶೆಣೈ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin