ಮತ್ತೆ ಬಣ್ಣ ಹಚ್ಚಲಿದ್ದಾರೆ ಸಂಜಯ್‍ದತ್

ಈ ಸುದ್ದಿಯನ್ನು ಶೇರ್ ಮಾಡಿ

Sanjay-Dutt

ಸಂಜಯ್‍ದತ್ ಬಾಲಿವುಡ್‍ನಲ್ಲಿ ತಮ್ಮ ಎರಡನೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಎಕೆ-47 ರೈಫಲ್ ಹೊಂದಿದ್ದ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಫೆಬ್ರವರಿಯಲ್ಲಿ ಬಿಡುಗಡೆಯಾದ ಸಂಜಯ್ ಬಿ ಟೌನ್ ಚಿತ್ರಗಳಲ್ಲಿ ನಟಿಸಲು ಬಣ್ಣ ಹಚ್ಚಲಿದ್ದಾರೆ. ಸೆರೆವಾಸ ಅಂತ್ಯ ಹೊಸ ಬದುಕಿನತ್ತ ಸ್ವಾತಂತ್ರ್ಯದ ಖುಷಿಯಲ್ಲಿರುವ 57 ವರ್ಷದ ನಟ ಕ್ಯಾಮೆರಾ ಮುಂದೆ ನಿಲ್ಲಲು ಇಚ್ಛಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷದಿಂದ ಸಂಜಯ್‍ದತ್ ಶೂಟಿಂಗ್ ಶುರುವಾಗಲಿದೆ.  ಸಂಜಯ್ ಸಿನಿಮಾಗಳ ಮೇಲೆ ಬಂಡವಾಳ ಹೂಡಲು ನಿರ್ಮಾಪಕರೂ ರೆಡಿ ಇದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಸಿನಿಮಾ ಮೂಲಕ ಬಾಲಿವುಡ್‍ನಲ್ಲಿ ಎರಡನೆ ಅಭಿಯಾನಕ್ಕೆ ಹಿರಿಯ ನಟ ಮುನ್ನುಡಿ ಬರೆಯಲಿದ್ದಾರೆ.  ಸಂಜು ಜೈಲು ಪಾಲಾಗುತ್ತಿದ್ದಂತೆ ಆತ ಮತ್ತೆ ನಟಿಸುವ ಆಸೆ ಕಮರಿ ಹೋಗಿತ್ತು. ಸಂಜಯ್ ದತ್ ಮತ್ತೆ ನಟಿಸುತ್ತಾರೆ… ಇದರಲ್ಲಿ ಅನುಮಾನ ಬೇಡ. ಮುಂದಿನ ವರ್ಷದಿಂದ ಅವರ ಚಿತ್ರಗಳು ಸೆಟ್ ಏರಲಿವೆ ಎಂದು ಚಿತ್ರ ನಿರ್ಮಾತೃ ಗಿರೀಶ್ ಜೋಹಾರ್ ಹೇಳಿದ್ದಾರೆ. ಕಳಂಕ ಮುಕ್ತರಾಗಿರುವ ಸಂಜುಗೆ ALL THE BEST.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin