ಮತ್ತೆ ಭಾರತವನ್ನು ಕೆಣಕಿದ ಪಾಕ್ ಪ್ರಧಾನಿ ನವಾಜ್

ಈ ಸುದ್ದಿಯನ್ನು ಶೇರ್ ಮಾಡಿ

Nawaz

ಲಾಹೋರ್, ಸೆ.13-ಭಾರತವನ್ನು ಮತ್ತೆ ಕೆಣಕಿಸರುವ ಪಾಕಿಸ್ತಾನವು, ಈದ್-ಉಲ್ ಆಝಾವನ್ನು ಕಾಶ್ಮೀರಗಳು ಪವಿತ್ರ ಬಲಿದಾನಗಳಿಗೆ ಸಮರ್ಪಿಸುವುದಾಗಿ ಹೇಳಿದೆಯಲ್ಲದೇ, ಸೇನಾಪಡೆಗಳ ಮೂಲಕ ಕಾಶ್ಮೀರಿಗಳ ಧ್ವನಿಯನ್ನು ದಮನ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿದೆ.   ಈದ್ ಸಂದರ್ಭದಲ್ಲಿ ದೇಶದ ಮುಸ್ಲಿಮರಿಗೆ ಸಂದೇಶ ನೀಡಿರುವ ಅವರು, ಕಾಶ್ಮೀರಿಗಳ ತ್ಯಾಗ ಮತ್ತು ಬಲಿದಾನಗಳನ್ನು ನಾವು ಮರೆಯಲು ಸಾಧ್ಯವಿಲ್ಲ. ಕಾಶ್ಮೀರ ಜನತೆಯ ಪವಿತ್ರ ಬಲಿದಾನಗಳಿಗೆ ಈದ್ನನ್ನು ನಾವು ಸಮರ್ಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.  ಸೇನಾಪಡೆಗಳ ಮೂಲಕ ಕಾಶ್ಮೀರಿಗಳ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಭಾರತದಿಂದ ಸ್ವಾತಂತ್ರ್ಯ ಗಳಿಸಲು ಕಾಶ್ಮೀರದ ಜನತೆ ಮೂರನೇ ತಲೆಮಾರಿಗೂ ಹೋರಾಟವನ್ನು ತ್ಯಾಗ ಮಾಡಿದ್ದಾರೆ ಎಂದು ಷರೀಫ್ ಮತ್ತೆ ಭಾರತವನ್ನು ಕೆಣಕಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin