ಮತ್ತೆ ರಾಜಭವನಕ್ಕೆ ತೆರಳಿದ ಜೆಡಿಎಸ್ – ಕಾಂಗ್ರೆಸ್ ನಿಯೋಗ

ಈ ಸುದ್ದಿಯನ್ನು ಶೇರ್ ಮಾಡಿ

rajabhavana

ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಜೆಡಿಎಸ್’ನ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್’ನ ಪರಮೇಶ್ವರ್ ನೇತೃತ್ವದಲ್ಲಿ ೨೦ ಕ್ಕೂ ಹೆಚ್ಚು ಶಾಸಕರ ನಿಯೋಗ ರಾಜ್ಯಪಾಲರನ್ನು ಭೇಟಿಮಾಡಿ ಒತ್ತಾಯಿಸಿದ್ದಾರೆ.

ರಾಜ್ಯಪಾಲರನ್ನು ಭೇಟಿ ಮಾಡಲು ನಿಗದಿಪಡಿಸಿದ್ದ ಸಮಯಕ್ಕಿಂತ ಮುಂಚಿತವಾಗೇ ಬಂದ ಜೆಡಿಎಸ್ ಶಾಸಕರನ್ನು ರಾಜಭವನದ ಗೇಟ್ ಬಳಿ ಪೊಲೀಸರು ತಡೆದ ಪ್ರಸಂಗವೂ ನಡೆಯಿತು. ಪೋಲೀಸರ ಈ ನಡೆಗೆ ಶಾಸಕರಿಂದ ಆಕ್ರೋಶ ವ್ಯಕ್ತವಾಯಿತು. ನಂತರ ೧೦ ಮಂದಿ ಶಾಸಕರಿಗೆ ಒಳ ಪ್ರವೇಶಕ್ಕೆ ಅನುಮತಿ ದೊರೆತ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನಿಯೋಗ ಒಳಗೆ ತೆರಳಿ ರಾಜ್ಯಪಾಲರೊಂದಿಗೆ ಚರ್ಚೆ ನಡೆಸಲಾಯಿತು. ರಾಜ್ಯ ರಾಜಕಾರಣದಲ್ಲಿ ಪ್ರತಿ ಕ್ಷಣವೂ ಹೊಸ ಬೆಳವಣಿಗೆ, ತಿರುವುಗಳು ಪಡೆಯುತ್ತಿದ್ದು, ಜನರಲ್ಲಿ ತೀವ್ರ ಕುತೂಹಲವನಂತೂ ಮೂಡಿಸಿದೆ.

Facebook Comments

Sri Raghav

Admin