ಮತ್ತೊಂದು ಇನ್ನಿಂಗ್ಸ್ ಗೆಲುವಿನತ್ತ ಕೊಹ್ಲಿ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

85e2b2dbb35ca49ffb94675c848f9135_Mಜಮೈಕಾ,  ಆ.2- ಉಪನಾಯಕ ಅಜಿಂಕ್ಯಾ ರಹಾನೆ (108*) ಅವರ  ಟೆಸ್ಟ್ ಜೀವನದ 8ನೆ ಶತಕದ ನೆರವಿನಿಂದ ಭಾರತ ತಂಡವು 500 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ‍್ಡ್ ಮಾಡಿಕೊಂಡಿದ್ದು ಮತ್ತೊಂದು ಇನ್ನಿಂಗ್ಸ್‌ನ ಗೆಲುವಿಗೆ ಮುನ್ನುಡಿ ಬರೆದಿದ್ದಾರೆ. ಜಮೈಕಾ   ಪಿಚ್‌ನಲ್ಲಿ ಭಾರತ ತಂಡವು  500ರನ್‌ಗಳ ಗಡಿ ದಾಟಿರುವುದು ಇದೇ ಮೊದಲು ಈ ಹಿಂದೆ ಭಾರತ ತಂಡವು 1953ರಲ್ಲಿ  ಗಳಿಸಿದ್ದ 444 ರನ್‌ಗಳ ರನ್ ಗರಿಷ್ಠ ಮೊತ್ತವಾಗಿತ್ತು.   ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್ 196 ರನ್‌ಗಳಿಗೆ ಅಲೌಟಾಗಿದ್ದು ಈಗ ದ್ವಿತೀಯ ಇನ್ನಿಂಗ್ಸ್‌ನಲ್ಲಿ 304  ರನ್‌ಗಳ ಸವಾಲನ್ನು ಪಡೆದಿದೆ.

ರಹಾನೆ- ಶಾ ಮ್ಯಾಜಿಕ್:

ಭಾರತ ತಂಡವು ಎರಡನೇ ದಿನದ ಅಂತ್ಯಕ್ಕೆ 358 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಮೂರನೆ ದಿನದ ಆಟವನ್ನು ಆರಂಭಿಸಿದ ಉಪನಾಯಕ ರಹಾನೆ ಹಾಗೂ  ವಿಕೆಟ್ ಕೀಪರ್  ವೃದ್ಧಿಮಾನ್ ಷಾ ಅವರು ಆರಂಭದಿಂದಲೂ  ಕೆರಿಬಿಯನ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ  6 ನೆ ವಿಕೆಟ್‌ಗೆ 99 ರನ್‌ಗಳ  ಜೊತೆಯಾಟ ನೀಡಿದರು. ಮೂರನೆ ದಿನದ ಭೋಜನ ವಿರಾಮದವರೆಗೂ ವಿಕೆಟ್ ಬೀಳದೆ ತಾಳ್ಮೆಯಿಂದ ಆಟವಾಡಿದ ಈ ಜೋಡಿಯನ್ನು ಬೇರ್ಪಡಿಸಿ ಹೋಲ್ಡರ್ ಮಾಡಿದ ಎಲ್ಲ ತಂತ್ರಗಳು ವಿಫಲವಾದವು.   ಭೋಜನ ವಿರಾಮದ ನಂತರ  ವಿಂಡೀಸ್ ನಾಯಕ ಹೋಲ್ಡರ್ ಎಸೆದ 151.4 ಓವರ್‌ನಲ್ಲಿ ವೃದ್ಧಿಮಾನ್ ಷಾ (47)ರ ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು. ನಂತರ ಬಂದ ಅಮಿತ್‌ಮಿಶ್ರಾ ಕೂಡ ಆಕ್ರಮಣಕಾರಿ ಹೋರಾಟಕ್ಕೆ ಮುಂದಾಗಿ 21 ರನ್ ಗಳಿಸಿ ಚೇಸ್ ಬೌಲಿಂಗ್‌ನಲ್ಲಿ ಚಂದ್ರಿಕಾ  ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾಗಿ  ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ ನಂತರ ಕ್ರೀಸ್ ಬಂದ ಮೊಹಮ್ಮದ್ ಶಮಿ (0) ಚೇಸ್‌ರ  ಬೌಲಿಂಗ್‌ನಲ್ಲಿ   ಕ್ಲೀನ್ ಬೋಲ್ಡ್ ಆದರು. ಈ ನಡುವೆ ರಹಾನೆ ತಮ್ಮ 8ನೆ ಶತಕವನ್ನು ಸಿಡಿಸಿದರು.

 ಉಮೇಶ್ ಯಾದವ್ ಭರ್ಜರಿ ಆಟ:

ಬಾಲಂಗೋಚಿ ಬ್ಯಾಟ್ಸ್‌ಮನ್ ಉಮೇಶ್ ಯಾದವ್ ಅವರು ಕೆರಿಬಿಯನ್ ಬೌಲರ್‌ಗಳನ್ನು  ದಿಟ್ಟವಾಗಿ ಎದುರಿಸಿ ಕೇವಲ 14 ಎಸೆತಗಳಲ್ಲೇ 4 ಬೌಂಡರಿಗಳನ್ನೊ ಳಗೊಂಡಂತೆ 19 ರನ್‌ಗಳನ್ನು ಗಳಿಸುತ್ತಿದ್ದಂತೆ ನಾಯಕ  ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ‍್ಡ್ ಮಾಡಿಕೊಂಡರು. ಉಪನಾಯಕ ರಹಾನೆ 108 ರನ್ ಗಳಿಸಿ ಅಜೇಯರಾಗಿ ಉಳಿದರು.   ವಿರಾಟ್ ಕೊಹ್ಲಿ ಡಿಕ್ಲೇರ‍್ಡ್  ಘೋಷಿಸಿದ ಬೆನ್ನಲ್ಲೇ ಮಳೆ ಸುರಿದಿದ್ದರಿಂದ ಮೂರನೇ ದಿನದ ಆಟವನ್ನು ಮೊಟಕುಗೊಳಿಸಲಾಯಿತು. ಇಂದು ವೆಸ್ಟ್‌ಇಂಡೀಸ್ ಆಟಗಾರರು ಬ್ಯಾಟಿಂಗ್ ಆರಂಭಿಸಲಿದ್ದು  ಭಾರತ ಬೌಲರ್‌ಗಳು ತಮ್ಮ  ಚುರುಕಿನ ಬೌಲಿಂಗ್ ಅನ್ನು ಪ್ರದರ್ಶಿಸುವ ಮೂಲಕ ಮತ್ತೊಂದು ಇನ್ನಿಂಗ್ಸ್ ಗೆಲುವಿನ   ಉತ್ಸಾಹದಲ್ಲಿದ್ದಾರೆ.

ಸ್ಕೋರ್ ವಿವರ:

ವೆಸ್ಟ್‌ಇಂಡೀಸ್ ಮೊದಲ ಇನ್ನಿಂಗ್ಸ್  196, ಭಾರತ ಮೊದಲ ಇನ್ನಿಂಗ್ಸ್ 500/9  ಡಿಕ್ಲೇರ‍್ಡ್

Facebook Comments

Leave a Comments