ಮತ್ತೊಂದು ಸರ್ಜಿಕಲ್ ಸ್ಟ್ರೈಕ್‍ಗೆ ತಯಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

Surgical-Strike

ನವದೆಹಲಿ, ಡಿ.27- ಭಾರತೀಯ ವಿಶೇಷ ಪಡೆ ಹಾಗೂ ಕಮಾಂಡೋಗಳು ಎರಡನೇ ಸರ್ಜಿಕಲ್ ಸ್ಟ್ರೈಕ್‍ಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಅತ್ಯಾಧುನಿಕ ಹೈಟೆಕ್ ಶಸ್ತ್ರಾಸ್ತ್ರ ಖರೀದಿಗೆ ಕೆಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ 6,000 ಕೋಟಿ ರೂ.ಗೂ ಅಧಿಕ ಮೌಲ್ಯದ ಅತ್ಯಾಧುನಿಕ ಹೈಟೆಕ್ ಶಸ್ತ್ರಾಸ್ತ್ರ ಖರೀದಿಗೆ ಖರ್ಚು ಮಾಡುತ್ತಿರುವುದಾಗಿ ತಿಳಿದುಬಂದಿದೆ. ಈ ಮೊತ್ತದಲ್ಲಿ ಸುಮಾರು 5,500 ಕೋಟಿ ರೂ.ಗಳನ್ನು ಅತ್ಯಾಧುನಿಕ ದಾಳಿ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಸುಮಾರು 300 ಕೋಟಿ ರೂ.ವೆಚ್ಚಗಳಲ್ಲಿ ರೈಫ್ಲ್ಸ್, ಮಶೀನ್ ಗನ್ಸ್, ಗ್ರೆನೇಡ್ ಲಾಂಚರ್‍ಗಳನ್ನು ಖರೀದಿಸಲಾಗುತ್ತಿದೆ. ಅಲ್ಲದೆ, ಕೋಸ್ಟ್ ಗಾರ್ಡ್‍ಗೆ ಬಹು ಆಯಾಮಗಳ ದಾಳಿಗಳನ್ನು ಸಂಘಟಿಸುವುದಕ್ಕಾಗಿ ಆರು ಹೊಸ ವಿಮಾನಗಳನ್ನು ಖರೀದಿಸಲಾಗುತ್ತಿದೆ.

ಭಾರತೀಯ ವಾಯುಪಡೆಯ ಇನ್ನೂ ಒಂದು ಸಿ-17 ವಾಹಕ ವಿಮಾನವನ್ನು, ಸಂಹಾರಕ್ಕಾಗಿ ಸ್ವಯಂಚಾಲಿತ ಗ್ರೆನೇಡ್ ಲಾಂಚರ್‍ಗಳನ್ನು ಖರೀದಿಸುತ್ತಿದೆ ಎಂದು ತಿಳಿದುಬಂದಿದೆ.
ಇದೀಗ ಆ ರಹಸ್ಯ ಪ್ರಸ್ತಾವನೆಯಲ್ಲಿದ್ದ ಅಂಶಗಳ ಬಹಿರಂಗವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಅದರಂತೆ ಭಾರತ 6 ಸಾವಿರ ಕೋಟಿ ರೂ.ಗಳ ಯುದ್ಧೋಪಕರಣಗಳ ಖರೀದಿಗೆ ಅನುಮೋದನೆ ನೀಡಿದೆ ಎಂದು ಹೇಳಲಾಗುತ್ತಿದೆ. ಈ 6 ಸಾವಿರ ಕೋಟಿ ರೂ.ಗಳ ಪೈಕಿ 5500 ಕೋಟಿ ರೂ.ಗಳಲ್ಲಿ 6 ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಇನ್ನುಳಿದ ಹಣದಲ್ಲಿ 300 ಕೋಟಿ ರೂ.ಗಳನ್ನು ವ್ಯಯಿಸಿ ಸೇನಾಪಡೆಗೆ ಬೇಕಾದ ಅತ್ಯಾಧುನಿಕ ರೈಫಲ್‍ಗಳು, ಮೆಷಿನ್ ಗನ್ ಗಳು, ಅತ್ಯಾಧುನಿಕ ಗ್ರೆನೇಡ್ ಲಾಂಚರ್ ಗಳನ್ನು ಖರೀದಿಸಲು ಸೇನಾಧಿಕಾರಿಗಳು ಮುಂದಾಗಿದ್ದಾರೆ.

ಇದಲ್ಲದೆ, ಕರಾವಳಿ ಪಡೆಗೆ 6 ಹೊಸ ಕಣ್ಗಾವಲು ವಿಮಾನ ನೀಡಲಾಗುತ್ತಿದ್ದು, ಭಾರತೀಯ ವಾಯುಪಡೆಗೆ ಒಂದು ಸಿ-17 ಸರಕು ಸಾಗಾಣಿಕೆ ವಿಮಾನ ಖರೀದಿಸಲಾಗಿದೆ. ಅಂತೆಯೇ ವಿಶೇಷ ಪಡೆಗೆ ಆಟೋಮ್ಯಾಟಿಕ್ ಗ್ರೆನೇಡ್ ಲಾಂಚರ್‍ಗಳನ್ನು ಪೂರೈಸಲಾಗಿದೆ. ಇವುಗಳನ್ನು ಬಳಸಿಕೊಂಡು ಉಗ್ರರ ಹುಟ್ಟಡಗಿಸುವ ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ 6 ಗಸ್ತು ವಿಮಾನ ನಿರ್ಮಾಣ, ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಕರಾವಳಿ ರಕ್ಷಣಾ ಪಡೆಗೆ ಅಗತ್ಯವಿರುವ ಆರು ಗಸ್ತು ವಿಮಾನಗಳನ್ನು ಭಾರತದಲ್ಲೇ ನಿರ್ಮಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ಭಾರತೀಯ ವಾಯುಪಡೆಗೆ 56 ವಿಮಾನಗಳ ಅಗತ್ಯವಿದ್ದು, ಕರಾವಳಿ ರಕ್ಷಣಾ ಪಡೆಯನ್ನೂ ಸೇರಿಸಿದರೆ 62 ಗಸ್ತು ವಿಮಾನಗಳು ಬೇಕಾಗಲಿವೆ. ಇವುಗಳಲ್ಲಿ ಬಹುತೇಕ ವಿಮಾನಗಳನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿ ತಯಾರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಮೂರು ತಿಂಗಳ ಹಿಂದೆ ಅಂದರೆ ಸೆಪ್ಟೆಂಬರ್‍ನಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯೊಳಗೆ ನುಗ್ಗಿ ಅಲ್ಲಿದ್ದ ಏಳು ಭಯೋತ್ಪಾದಕರ ಶಿಬಿರಗಳನ್ನು ಧ್ವಂಸ ಮಾಡಿದ್ದರು. ಆದರೆ ಎರಡನೇ ಸರ್ಜಿಕಲ್ ಸ್ಟ್ರೈಕ್ಸ್‍ಗೆ ಸಂಬಂಧಿಸಿದಂತೆ ಭಾರತೀಯ ಸೇನೆಯಿಂದ ಯಾವುದೇ ರೀತಿಯ ಸ್ಪಷ್ಟನೆ ಲಭ್ಯವಾಗಿಲ್ಲ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin