ಮತ್ತೊಬ್ಬ ಜಮಾಅತ್ ಎ-ಇಸ್ಲಾಮಿ ಮುಖಂಡನನ್ನ ನೇಣಿಗೇರಿಸಿದ ಬಾಂಗ್ಲಾ

ಈ ಸುದ್ದಿಯನ್ನು ಶೇರ್ ಮಾಡಿ

Islam

ಢಾಕಾ, ಸೆ.4.ಬಾಂಗ್ಲಾದೇಶದಲ್ಲಿ ಜಮಾಅತ್ ನಾಯಕರ ಗಲ್ಲಿನ ಸರಣಿ ಮುಂದುವರೆದಿದ್ದು, ಜಮಾಅತ್ ಎ- ಇಸ್ಲಾಮಿ ಮುಖಂಡ ಹಾಗೂ ಮಾಧ್ಯಮ ದಿಗ್ಗಜ ಮೀರ್ ಖಾಸಿಂ ಅಲಿ ಅವರನ್ನು ನಿನ್ನೆ ರಾತ್ರಿ ನೇಣುಗಂಬಕ್ಕೇರಿಸಲಾಗಿದೆ. ಇದರೊಂದಿಗೆ 1971ರ ಪಾಕಿಸ್ತಾನ ವಿರುದ್ಧದ ವಿಮೋಚನಾ ಯುದ್ಧದಲ್ಲಿ ಎಸಗಿದ ಅಪರಾಧಕ್ಕಾಗಿ ಗಲ್ಲಿಗೇರಿಸಿದ ಇಸ್ಲಾಮಿಸ್ಟ್‍ಗಳ ಸಂಖ್ಯೆ ಆರಕ್ಕೇರಿದೆ.  ಢಾಕಾ ಹೊರವಲಯದ ಕಾಶಿಂಪುರ ಕೇಂದ್ರೀಯ ಕಾರಾಗೃಹದಲ್ಲಿ ಅಲಿ ಅವರನ್ನು ಗಲ್ಲಿಗೇರಿಸಲಾಯಿತು.  ರಾತ್ರಿ 10:35ಕ್ಕೆ ಶಿಕ್ಷೆ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವ ಅಸಾದುಝಮಾನ್ ಖಾನ್ ಪ್ರಕಟಿಸಿದ್ದಾರೆ. ಅಧ್ಯಕ್ಷರಿಂದ ಕ್ಷಮಾದಾನ ಬೇಡಲು 63 ವರ್ಷದ ಅಲಿ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಅಧ್ಯಕ್ಷರಿಂದ ಕ್ಷಮಾದಾನ ಬೇಡುವುದು ಅಲಿ ಅವರಿಗೆ ಕೊನೆಯ ಮಾರ್ಗವಾಗಿತ್ತು. ಇವರ ಪರಾಮರ್ಶೆ ಅರ್ಜಿಯನ್ನು ಸುಪ್ರೀಂಕೋರ್ಟ್ ಕಳೆದ ಮಂಗಳವಾರ ತಿರಸ್ಕರಿಸಿದ ಬಳಿಕ ಅಧ್ಯಕ್ಷರ ಕ್ಷಮಾದಾನ ಬೇಡುವುದು ಅನಿವಾರ್ಯವಾಗಿತ್ತು.  ಇದಕ್ಕೂ ಮುನ್ನ ಅಲಿ ಕುಟುಂಬದವರಿಗೆ ಮಾಹಿತಿ ನೀಡಿ ಅವರ ಭೇಟಿಗೆ ಅವಕಾಶ ನೀಡಲಾಗಿತ್ತು. 22 ಮಂದಿ ಕುಟುಂಬಸ್ಥರು ಅಂತಿಮವಾಗಿ ಅಲಿ ಅವರನ್ನು ಭೇಟಿ ಮಾಡಿದರು ಎಂದು ಟಿವಿ ವಾಹಿನಿಗಳು ವರದಿ ಮಾಡಿವೆ. ಅಲಿ ಹಲವು ಉದ್ದಿಮೆಗಳನ್ನು ಹಾಗೂ ಮಾಧ್ಯಮ ಸಂಸ್ಥೆಗಳ ಮಾಲೀಕರಾಗಿದ್ದರು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin