ಮತ್ತೊಮ್ಮೆ ಉದ್ವಿಗ್ನವಾಗಲಿದೆಯೇ ಮಂಗಳೂರು..?

ಈ ಸುದ್ದಿಯನ್ನು ಶೇರ್ ಮಾಡಿ

Mangalore-Deepak--01

ಮಂಗಳೂರು, ಜ.7- ಮತ್ತೊಮ್ಮೆ ಉದ್ವಿಗ್ನವಾಗಲಿದೆಯೇ ಮಂಗಳೂರು. ದೀಪಕ್‍ರಾವ್ ಹತ್ಯೆಗೆ ಪ್ರತೀಕಾರವಾಗಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಷೀರ್ ಇಂದು ಸಾವನ್ನಪ್ಪಿದ್ದು, ಅವರ ಅಂತಿಮ ಸಂಸ್ಕಾರ ಒಂದು ಕಡೆಯಾದರೆ, ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನಾ ಸಮಾವೇಶವಿದೆ. ಎರಡೂ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಶರತ್ ಮಡಿವಾಳ ಹತ್ಯೆ ಪ್ರಕರಣ ಸೇರಿದಂತೆ ಹಲವು ಹತ್ಯೆ ಪ್ರಕರಣಗಳ ಸಂಬಂಧ ಭದ್ರತೆ ಒದಗಿಸುವುದು ದಕ್ಷಿಣ ಕನ್ನಡ ಪೊಲೀಸರಿಗೆ ತೀವ್ರ ಸವಾಲಾಗಿತ್ತು.

ಇನ್ನೇನು ಸಮಾಧಾನ ಆಯಿತು ಎನ್ನುವಷ್ಟರಲ್ಲಿ ದೀಪಕ್‍ರಾವ್ ಹತ್ಯೆ ನಡೆದು ಅಂದೇ ಬಷೀರ್ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ನಡೆದಿರುವುದಲ್ಲದೆ ಹಲ್ಲೆಗೊಳಗಾದ ಬಷೀರ್ ಇಂದು ಸಾವನ್ನಪ್ಪಿದ್ದಾರೆ. ಇಂದೇ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮವೂ ಕೂಡ ಇದೆ. ಸಿದ್ದರಾಮಯ್ಯನವರು ಜಿಲ್ಲಾ ಪ್ರವಾಸದಲ್ಲಿದ್ದು, ಜಿಲ್ಲಾಡಳಿತ ಆ ಕಾರ್ಯಕ್ರಮಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕಿದೆ. ಇದರ ಜತೆಯಲ್ಲೇ ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕಿದೆ. ಪೊಲೀಸರಿಗೆ ಈ ಪರಿಸ್ಥಿತಿ ಸವಾಲಾಗಿ ಪರಿಣಮಿಸಿದೆ.

Facebook Comments

Sri Raghav

Admin