ಮತ ಎಣಿಕೆಯಲ್ಲಿ ಗೋಲ್‍ಮಾಲ್, ಬಿಜೆಪಿ ಅಭ್ಯರ್ಥಿಯಿಂದ ಆತ್ಮಹತ್ಯೆ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Vijugowda

ಬೆಂಗಳೂರು, ಮೇ 15- ಬಿಜಾಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವೇಳೆ ಗೋಲ್‍ಮಾಲ್ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ.  ಬಬಲೇಶ್ವರದಲ್ಲಿ ಸಚಿವ ಎಂ.ಬಿ.ಪಾಟೀಲ್ ಮುನ್ನಡೆ ಸಾಧಿಸುತ್ತಿದ್ದಂತೆ ವಿಜುಗೌಡ ಪಾಟೀಲ್ ಅವರು ಮತ ಎಣಿಕೆ ಸಂದರ್ಭದಲ್ಲಿ 12 ಮತಪೆಟ್ಟಿಗೆಗಳು ಬದಲಾಗಿವೆ. ಈ ಗೋಲ್‍ಮಾಲ್‍ನಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಪ್ರತಿಭಟನೆ ನಡೆಸಿದರು. ಸಚಿವ ಎಂ.ಬಿ.ಪಾಟೀಲ್ ಅವರ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. 12 ಮತ ಪೆಟ್ಟಿಗೆಗಳು ಬದಲಾಗಿರುವ ಸಾಧ್ಯತೆಗಳಿವೆ. ಹೀಗಾಗಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.  [ #ಕನ್ನಡಿಗರ ತೀರ್ಪು : ಕರ್ನಾಟಕ ವಿಧಾನಸಭಾ ಚುನಾವಣೆ -2018 ಫಲಿತಾಂಶ (Live) ]
 

Facebook Comments

Sri Raghav

Admin