ಮತ ಹಾಕದಿದ್ದರೆ, ಸರ್ಕಾರವನ್ನು ದೂಷಿಸುವ ಹಕ್ಕಿಲ್ಲ : ಸುಪ್ರೀಂಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

supreme-ocurt

ನವದೆಹಲಿ, ಫೆ.5– ನೀವು ಮತ ಚಲಾವಣೆ ಮಾಡಿದಿದ್ದರೆ, ಸರ್ಕಾರವನ್ನು ಪ್ರಶ್ನಿಸುವ ಅಥವಾ ದೂಷಿಸುವ ಹಕ್ಕು ನಿಮಗಿರುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳುವ ಮೂಲಕ ದೇಶದ ಜನರ ಮತದಾನದ ಹಕ್ಕಿನ ಮಹತ್ವವನ್ನು ಪ್ರತಿಪಾದಿಸಿದೆ.  ದೆಹಲಿ ಮೂಲದ ವಾಯ್ಸ್ ಆಫ್ ಇಂಡಿಯಾ ಎಂಬ ಎನ್‍ಜಿಒ ಪರವಾಗಿ ಕಾರ್ಯಕರ್ತ ಧಾನೇಶ್ ಲೇಶಧಾನ್ ಎಂಬುವರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮಹತ್ವದ ಹೇಳಿಕೆ ನೀಡಿದ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರನ್ನು ಒಳಗೊಂಡ ನ್ಯಾಯಪೀಠ, ಎಲ್ಲದಕ್ಕೂ ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ಒಬ್ಬ ವ್ಯಕ್ತಿಯು ಮತ ಚಲಾಯಿಸದಿದ್ದರೆ ಆತನಿಗೆ ಸರ್ಕಾರವನ್ನು ಪ್ರಶ್ನಿಸುವ, ದೂಷಿಸುವ ಅಥವಾ ನಿಂದಿಸುವ ಹಕ್ಕು ಇರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.

ಎಲ್ಲ ರಾಜ್ಯಗಳಲ್ಲೂ ಒಳಗೊಂಡಿರುವ ಒಂದು ಪ್ರಮುಖ ವಿಷಯದಲ್ಲಿ (ರಸ್ತೆಗಳು ಮತ್ತು ಪಾದಚಾರಿ ಮಾರ್ಗದ ಒತ್ತುವರಿ) ಏಕರೂಪದ ನಿರ್ಧಾರವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎನ್.ವಿ. ರಮಣ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೂ ಒಳಗೊಂಡ ಪೀಠ ಸ್ಪಷ್ಟಪಡಿಸಿತು.  ಅತಿಕ್ರಮಣಗಳನ್ನು ತೆರವುಗೊಳಿಸಲು ಸರ್ಕಾರವು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ದೇಶಾದ್ಯಂತ ನಡೆಯುತ್ತಿರುವ ಅತಿಕ್ರಮಣಗಳನ್ನು ತಡೆಯಲು ಒಂದೇ ಹೊದಿಕೆಯ ಆದೇಶ ನೀಡಬೇಕು ಎಂದು ಧಾನೇಶ್ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದ್ದರು. ಈ ಮನವಿಯ ಒಂದು ಹಂತದಲ್ಲಿ ನ್ಯಾಯಪೀಠವು ನೀವು ಮತ ಹಾಕುತ್ತೀರೋ ಅಥವಾ ಇಲ್ಲವೋ ಎಂದು ಧಾನೇಶ್‍ರನ್ನು ಕೇಳಿತು.

ನಿಜ ಹೇಳಬೇಕೆಂದರೆ ನಾನು ನನ್ನ ಜೀವಮಾನದಲ್ಲೇ ಮತ ಚಲಾಯಿಸಿಲ್ಲ ಎಂದು ಧಾನೇಶ್ ಉತ್ತರಿಸಿದರು. ಇದರಿಂದ ಕುಪಿತಗೊಂಡ ಸುಪ್ರೀಂಕೋರ್ಟ್ ನೀವು ಮತದಾನದ ಹಕ್ಕನ್ನು ಚಲಾಯಿಸದಿದ್ದರೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ನಿಮಗೆ ಇರುವುದಿಲ್ಲ. ನಾವು ದೆಹಲಿಯಲ್ಲಿ ಕುಳಿತು ದೇಶದ ವಿವಿಧ ರಾಜ್ಯಗಳಲ್ಲಿನ ಒತ್ತುವರಿ-ಅತಿಕ್ರಮಣದ ಬಗ್ಗೆ ಆದೇಶ ನೀಡಲಾಗುವುದಿಲ್ಲ. ಅಲ್ಲದೇ ಒಂದೇ ಹೊದಿಕೆಯ ತೀರ್ಪು ನೀಡಿದರೆ ಅದರಿಂದ ಬಾಕಿ ಇರುವ ಪ್ರಕರಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆದರಿಂದ ಈ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin