ಮತ ಹಾಕುವಂತೆ ಆಣೆ ಪ್ರಮಾಣ ಮಾಡಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ವಿಡಿಯೋ ಬಹಿರಂಗ

ಈ ಸುದ್ದಿಯನ್ನು ಶೇರ್ ಮಾಡಿ


ರಾಯಚೂರು. ಮೇ.11 : ಲಿಂಗಸಗೂರು ಕಾಂಗ್ರೆಸ್ ಅಭ್ಯರ್ಥಿ ಡಿಎಸ್ ಹೂಲಗೇರಿಯಿಂದ ಚುನಾವಣಾ ಅಕ್ರಮ ಬಯಲಾಗಿದೆ. ಲಿಂಗಸಗೂರು ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್.ಹೂಲಗೆರಿ ಚಿಕ್ಕಲೆಕ್ಕಿಹಾಳ ಗ್ರಾಮದ ದುರಗಮ್ಮದೇವಿ ದೇವಸ್ಥಾನ ಮುಂದೆ ಮತದಾರನಿಗೆ ಒತ್ತಾಯ ಪೂರಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಆಣೆ ಪ್ರಮಾಣ ಮಾಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

Congessss

ತಮ್ಮನ್ನೇ ಬೆಂಬಲಿಸುವಂತೆ ಆಗ್ರಹಿಸಿ ಆಣೆ ಮಾಡುವಂತೆ ಒತ್ತಾಯಿಸಿ, ವ್ಯಕ್ತಿ ಒಪ್ಪದಿರುವಾಗ ದೇವರ ಮುಂದಿರುವ ಆಧಾರ ಮುಟ್ಟಿಸಿ ಪ್ರಮಾಣ ಮಾಡಿಸಿಕೊಂಡ ವಿಡಿಯೋ ಬಹಿರಂಗವಾಗಿದೆ.   ಸಾರ್ವಜನಿಕರೆದುರೇ ನಡೆದ ಈ ಘಟನೆ ಈಗ ಸಾರ್ವತ್ರಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.  ಕೂಡಲೇ ಚುನಾವಣಾ ಅಧಿಕಾರಿಗಳು ಅಭ್ಯರ್ಥಿ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

Facebook Comments

Sri Raghav

Admin