ಮಥುರಾದ ವೃಂದಾವನದಲ್ಲಿ ಆಶ್ರಮ ಮುಖ್ಯಸ್ಥನ ಕಾಮಕಾಂಡ

ಈ ಸುದ್ದಿಯನ್ನು ಶೇರ್ ಮಾಡಿ

Rape-000

ಮಥುರಾ, ನ.6- ಆಶ್ರಮವೊಂದರ ಮುಖ್ಯಸ್ಥನೊಬ್ಬ ದೆಹಲಿಯ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಥುರಾದ ವೃಂದಾವನದಲ್ಲಿ ನಡೆದಿದೆ. ಆಶ್ರಮಗಳಲ್ಲಿ ನಡೆಯುತ್ತಿರುವ ಕಾಮಕಾಂಡಗಳ ಬೆನ್ನಲ್ಲೇ ಇಂಥ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದ್ದು, ಧಾರ್ಮಿಕ ಸಂಸ್ಥೆಗಳನ್ನು ಭಕ್ತರು ಅನುಮಾನದಿಂದ ನೋಡುವಂತಾಗಿದೆ.  ಮಥುರಾದ ವೃಂದಾವನದಲ್ಲಿನ ವಿಪಿನ್ ಮಹಾರಾಜ ಗುರುಗಳ ರಾಸ್ ಬೆಹರಿ ಟ್ರಸ್ಟ್ ಚಾರಿಟೆಬಲ್ ಆಶ್ರಮಕ್ಕೆ ತಮ್ಮ ಪತಿಯೊಂದಿಗೆ ತೆರಳಿದ್ದ ಮಹಿಳೆ ಮೇಲೆ ಆಶ್ರಮದ ಮುಖ್ಯಸ್ಥ ಜುಲೈ 28ರಂದೇ ಅತ್ಯಾಚಾರ ಎಸಗಿದ್ದರೂ ಪ್ರಕರಣ ಬೆಳಕಿಗೆ ಬಂದಿರುವುದು ತಡವಾಗಿ.

ಈ ಸಂಬಂಧ ಅತ್ಯಾಚಾರ ಸಂತ್ರಸ್ತೆ ದೆಹಲಿಯಲ್ಲಿ ಎಫ್‍ಐಆರ್ ದಾಖಲಿಸಿದ್ದು, ಮುಂದಿನ ತನಿಖೆಗಾಗಿ ಪ್ರಕರಣವನ್ನು ವೃಂದಾವನ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ವಿಪಿನ್ ಮಹಾರಾಜರನ್ನು ಭೇಟಿ ಮಾಡಲು ಜುಲೈ 28ರಂದು ತನ್ನ ಪತಿಯೊಂದಿಗೆ ಮಹಿಳೆ ಆಶ್ರಮಕ್ಕೆ ತೆರಳಿದ್ದಳು. ಆಶ್ರಮದ ಮುಖ್ಯಸ್ಥ ಹತ್ತಿರದ ಮಾರುಕಟ್ಟೆಯಿಂದ ಕೆಲವು ವಸ್ತುಗಳನ್ನು ತರುವಂತೆ ಪತಿಯನ್ನು ಕಳುಹಿಸಿ ನಂತರ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಎಂದು ಪೊಲೀಸರು ತಿಳಿಸಿದ್ದಾರೆ.  ಅತ್ಯಾಚಾರ ಎಸಗಿದ ನಂತರ ಈ ವಿಷಯವನ್ನು ಎಲ್ಲಿಯಾದರೂ ಬಾಯ್ಬಿಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ಧಾನೆ. ಈ ಸಂಬಂಧ ಮಹಿಳೆಯ ಹೇಳಿಕೆ ಪಡೆದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin