ಮದರ್ ಆಫ್ ಆಲ್ ಬಾಂಬ್’ಗೆ 36 ಐಎಸ್ ಉಗ್ರರು ಮಟಾಶ್

ಈ ಸುದ್ದಿಯನ್ನು ಶೇರ್ ಮಾಡಿ

MOAB

ಜಲಾಲಾಬಾದ್ (ಆಫ್ಘಾನಿಸ್ತಾನ), ಏ.14- ವಿಶ್ವಕ್ಕೆ ಕಂಟಕಪ್ರಾಯವಾಗಿರುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು ಸದೆಬಡಿಯಲು ಅಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದಲ್ಲಿ ಅತಿದೊಡ್ಡ ಅಣ್ವಸ್ತ್ರರಹಿತ ಬಾಂಬ್ ದಾಳಿ ನಡೆಸಿರುವ ಅಮೆರಿಕ ಸೇನೆ ಡಜನ್‍ಗಟ್ಟಲೆ ಉಗ್ರರನ್ನು ಹೊಸಕಿ ಹಾಕಿದೆ. ಅಲ್ಲದೇ ಉಗ್ರಗಾಮಿಗಳ ಕಾರಾಸ್ಥಾನವಾಗಿದ್ದ ಆಳ ಸುರಂಗ ಸಂಕೀರ್ಣವು ಪುಡಿಪುಡಿಯಾಗಿದ್ದು, ಐಎಸ್ ಬಂಡುಕೋರರಿಗೆ ಮರ್ಮಾಘಾತ ನೀಡಿದೆ.
ಅಮೆರಿಕ ವಾಯು ಸೇನೆ ನಡೆಸಿದ ದಾಳಿಯಲ್ಲಿ ಸಾವು-ನೋವು ಸಂಭವಿಸಿರುವುದನ್ನು ಅಫ್ಘನ್ ಅಧಿಕಾರಿಗಳು ಇಂದು ಖಚಿತಪಡಿಸಿದ್ದಾರೆ. ಅದೃಷ್ಟವಶಾತ್ ಈ ಮಿಂಚಿನ ಕಾರ್ಯಾಚರಣೆಯಲ್ಲಿ ಸಾರ್ವಜನಿಕರಿಗೆ ಗಾಯಗಳಾಗಿಲ್ಲ.

ಆರಂಭಿಕ ವರದಿ ಪ್ರಕಾರ ಅಮೆರಿಕದ ಮದರ್ ಆಫ್ ಆಲ್ ಬಾಂಬ್ ದಾಳಿಯಲ್ಲಿ 36 ಐಎಸ್ ಉಗ್ರರು ಹತರಾಗಿದ್ದಾರೆ. ಆದರೆ ಜೆಬಿಯು-43/ಬಿ ಮ್ಯಾಸಿವ್ ಆರ್ಡನೆನ್ಸ್ ಏರ್ ಬ್ಲಾಸ್ಟ್ (ಎಂಒಎಬಿ) ಸ್ಫೋಟದ ತೀವ್ರತೆಗೆ ಅನೇಕ ಭಯೋತ್ಪಾದಕರು ಬಲಿಯಾಗಿ, ಲೆಕ್ಕವಿಲ್ಲದಷ್ಟು ಉಗ್ರರು ಗಾಯಗೊಂಡಿದ್ದಾರೆ.
ಈ ಮಹಾ ಬಾಂಬ್ 30 ಅಡಿ ಉದ್ದ, ಸುಮಾರು 10,000 ಕೆಜಿ ತೂಕವಿದ್ದು, ಎಂಸಿ-130 ವಿಮಾನದ ಮೂಲಕ ನಿನ್ನೆ ರಾತ್ರಿ 7.32ರಲ್ಲಿ ನಂಗಹಾರ್ ಪ್ರಾಂತ್ಯದ ಅಚಿನ್ ಜಿಲ್ಲೆಯ ಐಸಿಸ್ ಅಡಗುದಾಣಗಳ ದಾಳಿ ನಡೆಸಲಾಗಿದೆ.

ನಾಗರಿಕರ ಮೇಲಿನ ರಾಸಾಯನಿಕ ದಾಳಿಗೆ ಆಕ್ರೋಶ ವ್ಯಕ್ತಪಡಿಸಿ ಸಿರಿಯಾ ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಅಚ್ಚರಿ ಮೂಡಿಸಿದ್ದ ಅಮೆರಿಕ ಈಗ ಆಫ್ಘಾನಿಸ್ತಾನದ ಪೂರ್ವಭಾಗದಲ್ಲಿ ತಲೆಮೆರೆಸಿಕೊಂಡಿದ್ದ ಐಎಸ್ ಉಗ್ರರ ಜಂಘಾಬಲವನ್ನೇ ಉಡುಗಿಸಿದೆ. ಈ ದಾಳಿಯಿಂದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಹೆದರಿ ಕಂಗಾಲಾಗಿದ್ದಾರೆ.

ಕಾರ್ಯಾಚರಣೆಗೆ ಟ್ರಂಪ್ ಶ್ಲಾಘನೆ :

ಈ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿದೆ ಎಂದು ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಾಯುಪಡೆಯ ಸಾಹಸವನ್ನು ಶ್ಲಾಘಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin