ಮದೀನಾ ತಲುಪಿದ ಕರ್ನಾಟಕದ ಹಜ್ ಯಾತ್ರಿಕರ ಪ್ರಥಮ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

Hujj--01

ಮದೀನಾ ಮುನವ್ವರ(ಸೌದಿ ಅರೇಬಿಯಾ), ಜು.25- ಪವಿತ್ರಾ ಹಜ್ ಕರ್ಮ ನಿರ್ವಹಿಸಲು ಕರ್ನಾಟಕ ಸೇರಿದಂತೆ ಭಾರತದಿಂದ ತೆರಳಿದ್ದ ಯಾತ್ರಿಗಳ ಮೊದಲ ತಂಡವು ಮದೀನಾ ಮುನವ್ವರದ ಕಿಂಗ್ ಅಬ್ದುಲ್ ಅಜಿಜ್ ವಿಮಾನ ನಿಲ್ದಾಣ ತಲುಪಿದೆ. ಕೆಸಿಎಫ್ ಮದೀನಾ ಕಾರ್ಯಕರ್ತರು ಯಾತ್ರಿಗಳನ್ನು ಖರ್ಜೂರ ಸೇರಿದಂತೆ ಶುಷ್ಕಫಲಗಳನ್ನು ನೀಡಿ ಸ್ವಾಗತಿಸಿದರು. ಗೋವಾ, ಕುಮಟಾ, ಭಟ್ಕಳ, ದಾವಣಗೆರೆ, ಹೊನ್ನಾವರ, ಬೆಳಗಾವಿ ಸೇರಿದಂತೆ ಭಾರತದ ಒಟ್ಟು 421 ಯಾತ್ರಾರ್ಥಿಗಳು ಮೊದಲ ವಿಮಾನದಲ್ಲಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಇಸ್ಮಾಯಿಲ್ ಸಿದ್ಧಿಕ್ ಭಟ್ಕಳ್, ಭಾರತದಲ್ಲಿ ಕೋಮು ಸಾಮರಸ್ಯ ಉಳಿಯಲು ಮೆಕ್ಕಾ ದಲ್ಲಿ ನಾವು ವಿಶೇಷ ಪಾರ್ಥನೆ ಸಲ್ಲಿಸುತ್ತೇವೆ ಎಂದು ಹೇಳಿದರು. ಕೆಸಿಪಿ ಮದೀನಾ ವಲಯದ ಅಧ್ಯಕ್ಷ ತಾಜುದ್ಧೀನ್ ಸುಳ್ಯ, ಸಂಚಾಲಕ ರಜಾಕ್ ಸಂತೋಷ ನಗರ್, ಜಬ್ಬಾರ್ ಕಾವಳಕಟ್ಟೆ ಮೊದಲಾದವರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin