ಮದುಮಗನಾದ ಯಶ್- ಮದುಮಗಳಾದ ರಾಧಿಕಾ

ಈ ಸುದ್ದಿಯನ್ನು ಶೇರ್ ಮಾಡಿ

Yash-01
ಬೆಂಗಳೂರು, ಡಿ.7-ಸ್ಯಾಂಡಲ್‍ವುಡ್ ತಾರಾ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‍ವುಡ್ ಕ್ವೀನ್  ರಾಧಿಕಾ ಪಂಡಿತ್ ಅವರ ವಿವಾಹ ಸಮಾರಂಭದ ಕಾರ್ಯಗಳು ಅದ್ಧೂರಿ ಹಾಗೂ ವಿಶೇಷವಾಗಿ ನಡೆಯುತ್ತಿವೆ. ಕಳೆದ ಎರಡು ದಿನಗಳಿಂದ ಇಬ್ಬರ ಮನೆಯಲ್ಲೂ ದೇವತಾ ಕಾರ್ಯಗಳು ಸಂಪ್ರದಾಯಬದ್ಧವಾಗಿ ನೆರವೇರಿವೆ. ಮೊನ್ನೆ ಯಶ್ ಶುಭ್ರ ಬಿಳಿ ಪಂಚೆ, ಬಿಳಿ ಶರ್ಟ್ ಧರಿಸಿ ಚಪ್ಪರ ಪೂಜೆ ಹಾಗೂ ಗೋ ಪೂಜೆ ಮಾಡಿದರೆ, ಇತ್ತ ರಾಧಿಕಾ ಪಂಡಿತ್ ರೇಷ್ಮೆ ಸೀರೆ, ರವಿಕೆ ಧರಿಸಿ ಕೈತುಂಬಾ ಬಳೆ ತೊಟ್ಟು ಪೂಜಾ ಕಾರ್ಯವನ್ನು ನೆರವೇರಿಸಿದರು.
ನಿನ್ನೆ ಸಂಜೆ ದೇವನಹಳ್ಳಿ ಸಮೀಪದ ರೆಸಾರ್ಟ್‍ವೊಂದರಲ್ಲಿ ಮೆಹಂದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯಶ್-ರಾಧಿಕಾ ಪಂಡಿತ್ ಮನೆಯವರು, ಆತ್ಮೀಯ ಸ್ನೇಹಿತರು ಮೆಹಂದಿ ಹಾಕುವ ಸಂಭ್ರಮದಲ್ಲಿ ತೊಡಗಿಕೊಂಡರು. ಜೊತೆಗೆ ರಸಮಂಜರಿ ಕಾರ್ಯಕ್ರಮ ವಿಶೇಷವಾಗಿ ಕಳೆಗಟ್ಟಿತ್ತು.

yash-2

ನಾಳೆ ಇಬ್ಬರ ಮನೆಯಲ್ಲೂ ಅರಿಶಿನ ಶಾಸ್ತ್ರ ಇರುವುದರಿಂದ ಎರಡೂ ಕುಟುಂಬಗಳಲ್ಲೂ ಪೂರ್ವ ತಯಾರಿ ನಡೆದಿದೆ. ಜೊತೆಗೆ ವಿವಿಧ ದೇವತಾ ಕಾರ್ಯಗಳು ನೆರವೇರಲಿವೆ.
ನಾಳಿದ್ದು ಶುಕ್ರವಾರ ಧಾರಾ ಮುಹೂರ್ತ ಅದ್ಧೂರಿಯಾಗಿ ನೆರವೇರಲಿದೆ. 10 ರಂದು ಬೆಂಗಳೂರು ಅರಮನೆ ತ್ರಿಪುರವಾಸಿನಿಯಲ್ಲಿ ಚಿತ್ರೋದ್ಯಮ ಗಣ್ಯರು, ರಾಜಕೀಯ ವ್ಯಕ್ತಿಗಳು, ಹಿತೈಷಿಗಳು, ಸ್ನೇಹಿತರಿಗಾಗಿ ಆರತಕ್ಷಕತೆ ಏರ್ಪಡಿಸಲಾಗಿದೆ.  ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರಿಗೂ ಸಾಕಷ್ಟು ಅಭಿಮಾನಿಗಳಿರುವುದರಿಂದ ಡಿ.11 ರಂದು ಅಭಿಮಾನಿಗಳಿಗಾಗಿಯೇ ವಿಶೇಷ ಔತಣ ಕೂಟವನ್ನು ಏರ್ಪಡಿಸಲಾಗಿದೆ.

Yash-65

Yash-4

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Yash-3

Facebook Comments

Sri Raghav

Admin