ಮದುವೆಗಾಗಿ ಬ್ಯಾಂಕ್ ನಿಂದ 2.5 ಲಕ್ಷ RBI ನೀಡಿದ ಶಾಕಿಂಗ್ ಷರತ್ತುಗಳ ಪಟ್ಟಿ ಇಲ್ಲಿದೆ ನೋಡಿ ..!

ಈ ಸುದ್ದಿಯನ್ನು ಶೇರ್ ಮಾಡಿ

Marriage-Notos

ನವದೆಹಲಿ. ನ.22: ಮದುವೆ ಉದ್ದೇಶಕ್ಕಾಗಿ ಬ್ಯಾಂಕ್‌ ಖಾತೆಗಳಿಂದ ಗರಿಷ್ಠ 2.5 ಲಕ್ಷ ರೂ. ಹಿಂಪಡೆಯುವ ಬಗ್ಗೆ ರಿಸರ್ವ್‌ ಬ್ಯಾಂಕ್‌ ಭಾರಿ ಷರತ್ತುಗಳನ್ನು ವಿಧಿಸಿದ್ದು, ವಿವಾಹ ಮಾಡುವವರು ಬ್ಯಾಂಕ್ ಗಳಿಗೆ ಷರತ್ತುಗಳನ್ನು ಪೂರೈಸುವುದು ಅತ್ಯಂತ ಕಠಿಣವಾಗಿದೆ. ಕಳೆದ ವಾರವೇ ಮದುವೆ ಉದ್ದೇಶಕ್ಕೆ 2.5 ಲಕ್ಷ ರೂ. ಹಣ ತೆಗೆಯಲು ವಿನಾಯಿತಿ ಪ್ರಕಟಿಸಿಲಾಗಿತ್ತಾದರೂ, ಈ ಸಂಬಂಧ ಆರ್‌ಬಿಐ ಅಧಿಸೂಚನೆ ಬ್ಯಾಂಕ್‌ಗಳಿಗೆ ತಲುಪದ ಕಾರಣ ಈ ಆದೇಶ ಜಾರಿಯಾಗಿರಲಿಲ್ಲ. ಇದೀಗ ಆರ್‌ಬಿಐ ಕಠಿಣ ಷರತ್ತುಗಳೊಂದಿಗೆ ಈ ಸೌಲಭ್ಯದ ನಿಯಮಗಳನ್ನು ಪ್ರಕಟಿಸಿದೆ.

ಷರತ್ತುಗಳ ವಿವರ :

 • ನೋಟು ರದ್ದು ಆದೇಶ ಹೊರಬಿದ್ದ ದಿನವಾದ ನ.8ರಂದು ಅಥವಾ ಅದಕ್ಕೂ ಮುನ್ನವೇ ಖಾತೆಯಲ್ಲಿ 2.5 ಲಕ್ಷ ರೂ. ಬ್ಯಾಲೆನ್ಸ್‌ ಹೊಂದಿರಬೇಕು.
  ನ.8ರ ಬಳಿಕ ಜಮೆ ಮಾಡಲಾದ ಹಣ ತೆಗೆಯಲು ಅವಕಾಶವಿಲ್ಲ.
 • ಅರ್ಜಿಯಲ್ಲಿ ವರ ಮತ್ತು ವಧುವಿನ ಹೆಸರನ್ನು ನಮೂದಿಸಬೇಕು.
 • ಐಡಿ ಪ್ರೂಫ್‌, ವಿಳಾಸ ದಾಖಲೆ ಹಾಗೂ ಮದುವೆ ದಿನಾಂಕವನ್ನು ಒದಗಿಸಬೇಕು.
 • ಅರ್ಜಿ ಜತೆಗೆ ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು.
 • ಇದರ ಭಾಗವಾಗಿ ವಿವಾಹ ಆಹ್ವಾನ ಪತ್ರಿಕೆ, ಕಲ್ಯಾಣ ಮಂಟಪ, ಕೆಟರಿಂಗ್‌ ಇತ್ಯಾದಿ ಸೇವೆಗಳಿಗೆ ಅಡ್ವಾನ್ಸ್‌ ಹಣ ಪಾವತಿಸಿರುವ ಬಗ್ಗೆ ರಸೀದಿ ಒದಗಿಸಬಹುದು.
 • ವಿತ್‌ಡ್ರಾ ಮಾಡಲಾದ ನಗದನ್ನು ಬ್ಯಾಂಕ್‌ ಖಾತೆ ಹೊಂದಿರದ ವ್ಯಕ್ತಿಗಳಿಗಷ್ಟೇ ಪಾವತಿಸಬೇಕು
 • ಹಣ ಪಡೆದ ವ್ಯಕ್ತಿಗಳ ಹೆಸರನ್ನು ಕ್ಯಾಶ್‌ ವಿತ್‌ ಡ್ರಾಗಾಗಿ ಸಲ್ಲಿಸುವ ಅರ್ಜಿಯಲ್ಲಿ ನಮೂದಿಸಬೇಕು.
 • ತಾವು ಹಣ ಪಾವತಿಸುತ್ತಿರುವ ವ್ಯಕ್ತಿಗಳಿಗೆ ಬ್ಯಾಂಕ್‌ ಖಾತೆ ಇಲ್ಲವೆಂಬುದನ್ನು ಅರ್ಜಿದಾರರು ಪ್ರಮಾಣೀಕರಿಸಿ ಸಹಿ ಹಾಕಬೇಕು.
 • ಬ್ಯಾಂಕ್‌ ಖಾತೆ ಹೊಂದಿರುವ ವ್ಯಕ್ತಿಗಳಿಗೆ ನಗದು ರೂಪದಲ್ಲಿ ಹಣ ಪಾವತಿಸಲು ಅವಕಾಶವಿಲ್ಲ.
 • ಅಂಥವರಿಗೆ ಚೆಕ್‌, ಆನ್‌ಲೈನ್‌ ಪೇಮೆಂಟ್‌ ಇಲ್ಲವೇ ಡೆಬಿಟ್‌ ಕಾರ್ಡ್‌ ಮೂಲಕ ಹಣ ಟ್ರಾನ್ಸ್‌ಫರ್‌ ಮಾಡಬಹುದು.
 • ಡಿ.30, 2016ರ ಒಳಗೆ ಮದುವೆ ನಡೆಯುವಂತಿದ್ದರೆ ಮಾತ್ರ ಹಣ ವಿತ್‌ಡ್ರಾ ಮಾಡಬಹುದು.
 • ವಧು, ವರ ಅಥವಾ ಅವರ ತಂದೆ-ತಾಯಿ ಪೈಕಿ ಯಾರಾದರೂ ಒಬ್ಬರಿಗೆ ಮಾತ್ರ ಹಣ ವಿತ್‌ಡ್ರಾ ಮಾಡಲು ಅವಕಾಶ.
 • ಚೆಕ್‌, ಡ್ರಾಫ್ಟ್‌, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌, ಎನ್‌ಇಎಫ್‌ಟಿ/ಆರ್‌ಟಿಜಿಎಸ್‌ನಂತಹ ಕ್ಯಾಶ್‌ಲೆಸ್‌ ಮಾರ್ಗಗಳ ಮೂಲಕ ಹಣ ಪಾವತಿಸುವಂತೆ ಬ್ಯಾಂಕ್‌ಗಳು ಗ್ರಾಹಕರಿಗೆ ಉತ್ತೇಜಿಸಬೇಕು.
 • ಬ್ಯಾಂಕ್‌ಗಳು ಗ್ರಾಹಕರಿಂದ ಪಡೆದ ದಾಖಲೆಗಳನ್ನು ಸಂಗ್ರಹಿಸಿ, ಅಗತ್ಯಬಿದ್ದಾಗ ತೆರಿಗೆ ಅಧಿಕಾರಿಗಳಿಗೆ ಒದಗಿಸಬೇಕು.

► Follow us on –  Facebook / Twitter  / Google+

 

Facebook Comments

Sri Raghav

Admin