ಮದುವೆಗೂ ಮೊದಲು ಮತದಾನ ಮಾಡಿದ ಮಧುಮಗಳು

ಈ ಸುದ್ದಿಯನ್ನು ಶೇರ್ ಮಾಡಿ

Marraige

ಮಂಗಳೂರು, ಮೇ12-ಮಧುಮಗಳೊಬ್ಬಳು ಮತದಾನ ಮಾಡಿ ನಂತರ ಮದುವೆಯಾಗಿರುವ ಪ್ರಸಂಗ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಪಚ್ಚನಾಡಿಯ ವಿಯೋಲಾ ಮಾರಿಯಾ ಫರ್ನಾಂಡಿಸ್ ಮತ್ತು ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಅವರ ಮದುವೆ ಇಂದು ನಿಗದಿಯಾಗಿತ್ತು. ಮತದಾನಕ್ಕೂ ಮುನ್ನ ವಿಯೋಲಾ ಮಧುಮಗಳ ಅಲಂಕಾರದಲ್ಲಿ ಬಂದು ನಗರದ ಬೋಂದೆಲ್ ಸೆಂಟ್ ಲಾರೆನ್ಸ್ ಶಾಲೆಯಲ್ಲಿ ಮತದಾನ ಮಾಡಿ ನಂತರ ಬೆಳ್ತಂಗಡಿಯಲ್ಲಿ ನಿಗದಿಯಾಗಿದ್ದ ಮದುವೆಯಲ್ಲಿ ಹಸೆಮಣೆ ಏರಿದರು.

ಮತ್ತೊಂದು ಪ್ರಕರಣದಲ್ಲಿ ಮತದಾನಕ್ಕೆ ಅವಕಾಶ ಸಿಕ್ಕಿಲ್ಲ ಎಂದು ತುಂಬು ಗರ್ಭಿಣಿಯೊಬ್ಬರು ಬಿಕ್ಕಿ ಬಿಕ್ಕಿ ಅತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂಲತಃ ಧಾರವಾಡದವರಾದ ಚೈತ್ರ ಮದುವೆಯಾದ ನಂತರ ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿ ವಾಸವಾಗಿದ್ದಾರೆ. ತುಂಬು ಗರ್ಭಿಣಿಯಾಗಿರುವ ಅವರು ಮತದಾನ ಮಾಡಲು ಇಂದು ಬೆಳಗ್ಗೆ ಬನಶಂಕರಿಯ ಬಿಎನ್‍ಎಂ ಕಾಲೇಜಿನ 142ರ ಮತಗಟ್ಟೆ ಆಗಮಿಸಿದರು. ಆದರೆ ಚೈತ್ರ ಅವರ ಬಳಿ ಮತದಾರರ ಗುರುತಿನ ಚೀಟಿಯ ಅಸಲಿ ಕಾರ್ಡ್ ಬದಲಾಗಿ ಜೆರಾಕ್ಸ್ ಪ್ರತಿಯನ್ನು ತಂದಿದ್ದರು.

ಇದರ ಆಧಾರದ ಮೇಲೆ ಮತದಾನ ಮಾಡಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿಗಳು ನಿರಾಕರಿಸಿದರು. ಇದಕ್ಕಾಗಿ ಚೈತ್ರ ಬಿಕ್ಕಿ ಬಿಕ್ಕಿ ಅತ್ತರು. ಕೊನೆಗೆ ಮತದಾರರ ಪಟ್ಟಿಯಲ್ಲಿರುವ ಫೋಟೋ ಗುರುತಿಸಿ ಅವರಿಗೆ ಮತ ಹಾಕಲು ಅವಕಾಶ ನೀಡಲಾಯಿತು.

Facebook Comments

Sri Raghav

Admin