ಮದುವೆಗೆ ನೀಡಲಾಗುತ್ತಿದ್ದ 2.5 ಲಕ್ಷ ರೂ. ಮಿತಿ ಹೆಚ್ಚಳ ಕೋರಿದ್ದ ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Delhi-High-Copurt

ನವದೆಹಲಿ, ನ.30- ನೋಟು ಅಮಾನ್ಯಗೊಳಿಸಿರುವುದರಿಂದ ಮದುವೆ ಸಮಾರಂಭಗಳಿಗಾಗಿ 2.5 ಲಕ್ಷ ರೂ.ಗಳನ್ನು ಬ್ಯಾಂಕ್‍ಗಳಿಂದ ಹಿಂಪಡೆಯುವ ಮಿತಿಗೆ ವಿನಾಯಿತಿ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಕೇಂದ್ರ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ.  ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಮತ್ತು ನ್ಯಾಯಮೂರ್ತಿ ಸಂಗೀತ ಧಿಂಗ್ರಾ ಸೇಹಗಲ್ ಅವರನ್ನೊಳಗೊಂಡ ನ್ಯಾಯಪೀಠ ಈ ಕುರಿತ ಅರ್ಜಿಯನ್ನು ವಜಾಗೊಳಿಸುವುದಾಗಿ ಘೋಷಿಸಿತು.

ನೋಟು ರದ್ದತಿಗೊಳಿಸಿದ ನಂತರ ವಿವಾಹ ಸಮಾರಂಭಗಳಿಗೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಬ್ಯಾಂಕ್‍ಗಳಿಂದ 2.5 ಲಕ್ಷ ರೂ.ಗಳನ್ನು ವಿತ್‍ಡ್ರಾ ಮಾಡಲು ಕೇಂದ್ರ ಅವಕಾಶ ಮಾಡಿಕೊಟ್ಟಿದೆ. ಈ ಮಿತಿ ಷರತ್ತನ್ನು ಸಡಿಲಿಸಿದರೆ ಅಥವಾ ಹೆಚ್ಚಳ ಮಾಡಿದರೆ ಯಾರು ಬೇಕಾದರೂ ಮದುವೆ ಅಮಂತ್ರಣ ಪತ್ರಿಕೆಗಳನ್ನು ಮುದ್ರಣ ಮಾಡಿ ಬ್ಯಾಂಕ್‍ಗಳಿಗೆ ಹೋಗಿ ಅದನ್ನು ತೋರಿಸಿ ಸುಲಭವಾಗಿ ಹಣ ಡ್ರಾ ಮಾಡಿಕೊಳ್ಳ ಬಹುದಾಗಿದೆ. ಇದರ ದುರ್ಬಳಕೆಗೆ ಆಸ್ಪದ ನೀಡಬಾರದೆಂಬ ಉದ್ದೇಶದಿಂದ ಕೆಲವು ಷರತ್ತುಗಳೊಂದಿಗೆ ಜಾರಿಗೊಳಿಸಲಾಗಿದೆ ಎಂಬ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರ ಅಭಿಪ್ರಾಯವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಪ್ರಕರಣ ಕುರಿತ ನ.28ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಈ ಬಗ್ಗೆ ಇಂದು ತೀರ್ಪು ನೀಡಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin