ಮದುವೆಗೆ ಪ್ರಧಾನಿ ಮೋದಿಯನ್ನು ಆಮಂತ್ರಿಸಿದ ಯುವರಾಜ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Yuvaraj-Singh

ನವದೆಹಲಿ, ನ.24- ಸಿಕ್ಸರ್‍ಗಳ ಸರದಾರ ಎಂದೇ ಖ್ಯಾತರಾಗಿರುವ ಯುವರಾಜ್‍ಸಿಂಗ್ ಅವರು ಇಂದು ಪ್ರಧಾನಿ ನರೇಂದ್ರಮೋದಿಯನ್ನು ಸಂಸತ್‍ನಲ್ಲಿ ಭೇಟಿ ಮಾಡಿ ತಮ್ಮ ವಿವಾಹಕ್ಕೆ ಆಮಂತ್ರಣ ನೀಡಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಬಾಲಿವುಡ್ ನಟಿ ಹೆಜೆಕ್ ಕಿಚ್‍ರೊಂದಿಗೆ ಯುವಿಯ ನಿಶ್ಚಿತಾರ್ಥವಾಗಿದ್ದು ಇವರ ವಿವಾಹ ಮಹೋತ್ಸವವು ಸಿಖ್ ಹಾಗೂ ಹಿಂದೂ ಧರ್ಮದ ಪ್ರಕಾರವಾಗಿ ಕ್ರಮವಾಗಿ ನವೆಂಬರ್ 30 ಹಾಗೂ ಡಿಸೆಂಬರ್ 2 ರಂದು ಜರುಗಲಿದೆ. ನವೆಂಬರ್ 30 ಸಿಖ್ ಸಂಪ್ರದಾಯದಂತೆ ಚಂದೀಘಡದ ಗುರುದ್ವಾರದಲ್ಲಿ ವಿವಾಹವಾದರೆ, ಡಿಸೆಂಬರ್ 2 ರಂದು ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆ ಈ ಜೋಡಿಯೂ ಸಪ್ತಪದಿಯನ್ನು ತುಳಿಯಲಿದ್ದಾರೆ.

ನಟಿ ಹೆಜೆಲ್‍ಕಿಚ್‍ರ ತಾಯಿ ಮೂಲತಃ ಹಿಂದೂ ಸಂಸ್ಕøತಿಯವರಾಗಿರುವುದರಿಂದ ಈ ರೀತಿಯ ವಿವಾಹ ನಡೆಸಲು ಎರಡು ಕುಟುಂಬಗಳ ಸದಸ್ಯರು ನಿರ್ಧರಿಸಿದ್ದಾರೆ. ಇದೇ ಅಲ್ಲದೆ ನವದೆಹಲಿಯಲ್ಲಿ ಡಿಸೆಂಬರ್ 5 ಮತ್ತು 7 ರಂದು ವಿವಾಹ ಆರತಕ್ಷತೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಯುವರಾಜ್ ಸಿಂಗ್ ಹಾಗೂ ಹೆಜೆಲ್‍ಕಿಚ್ ಅವರು ತಮ್ಮ ವಿವಾಹಕ್ಕೆ ಗಣ್ಯರನ್ನು ಆಮಂತ್ರಿಸಲು ಯುವರಾಜ್ ಮತ್ತು ಹೆಜೆಲ್ ಪ್ರೀಮಿಯರ್ ಲೀಗ್ (ವೈಎಚ್‍ಪಿಎಲ್) ಎಂಬ ತಂಡವನ್ನೇ ಸಿದ್ಧಪಡಿಸಿಕೊಂಡಿದ್ದಾರೆ. ಅಂತೂ ಇಂತೂ ಕದ್ದು ಮುಚ್ಚಿ ಪ್ರೇಮ ಸಲ್ಲಾಪ ನಡೆಸುತ್ತಿದ್ದ ಈ ಜೋಡಿಯು ಕೊನೆಗೂ ವಿವಾಹ ಬಂಧನಕ್ಕೆ ಒಳಗಾಗಿರುವುದು ಈ ಇಬ್ಬರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin