ಮದುವೆಗೆ ಹೊರಟವರು ಮಸಣಕ್ಕೆ : ಕ್ರೂಸರ್ ಪಲ್ಟಿಯಾಗಿ ಒಂದೇ ಕುಟುಂಬದ ಐವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bagalkot

ಕಮತಗಿ (ಬಾಗಲಕೋಟೆ ),ಆ22– ಮದುವೆ ದಿಬ್ಬಣಕ್ಕೆ ಹೊರಟಿದ್ದ ಕ್ರೂಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟು 9 ಜನರು ಗಾಯಗೊಂಡ ಘಟನೆ ಶಿರೂರು ಕಮತಗಿ ಮಧ್ಯೆ ರವಿವಾರ ರಾತ್ರಿ ಸಂಭವಿಸಿದೆ.  ಮೃತರನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕನಹಾಳ ಗ್ರಾಮದ ರಮೇಶ.ಮಾಂಗ(40), ಪಾತಪ್ಪ ಮಾಂಗ(45),ರಾಮು ಮಾಂಗ(35), ಶ್ರೀಶೈಲ ಮಾಂಗ(25) ಹಾಗೂ ಬಸಣ್ಣ ಮಾಂಗ(60) ಎಂಧು ಗುರುತಿಸಲಾಗಿದೆ.  ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ರಕ್ತದ ಮಸುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ 9 ಜನರನ್ನು 108 ಅಂಬುಲೇನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಕನಕಹಾಳ ಗ್ರಾಮದಿಂದ ಗಂಗಾವತಿ ಗ್ರಾಮಕ್ಕೆ ಮದುವೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಗಲಕೋಟೆ ಗ್ರಾಮಾಂತರ ಠಾಣೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆಕ್ರಂದನ: ಸುದ್ದಿ ತಿಳಿದ ತಕ್ಷಣ ಮೃತರ ಕುಟುಂಬದ ಸದಸ್ಯರು ಘಟನಾ ಸ್ಥಳಕ್ಕೆ ತೆರಳಿದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin