2ನೇ ಮದುವೆಗೆ ಮೂರು ಜೀವಗಳು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

Couple-Suicide

ದಾವಣಗೆರೆ, ಮೇ 25- ಮದುವೆಯಾಗಿ ಮೂರೇ ದಿನಕ್ಕೆ ಅಪ್ಪ ಮಲತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದ ಮಗನೂ ನೇಣಿಗೆ ಶರಣಾಗಿರುವ ದಾರುಣ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಹರಿಹರ ತಾಲೂಕಿನ ಬೇವಿನಹಳ್ಳಿ ನಿವಾಸಿ ಪಲ್ಲವಿ (26), ಗುಡಾಳು ಗ್ರಾಮದ ನಟರಾಜ್ (40) ಮತ್ತು ಮೊದಲ ಪತ್ನಿ ಮಗ ಪ್ರದೀಪ್(16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.  ದಾವಣಗೆರೆ ತಾಲೂಕಿನ ಗುಡಾಳು ಗ್ರಾಮದಲ್ಲಿ ವಾಸವಾಗಿದ್ದ ನಟರಾಜ್, 15 ವರ್ಷಗಳ ಹಿಂದೆ ಸರಿತಾ ಎಂಬಾಕೆಯನ್ನು ವಿವಾಹವಾಗಿದ್ದು, ಇವರಿಗೆ ಮೂವರು ಗಂಡು ಮಕ್ಕಳಿದ್ದರು.ಕೆಲ ವರ್ಷದ ಹಿಂದೆ ಪತ್ನಿ ಸರಿತಾ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೂವರು ಗಂಡು ಮಕ್ಕಳನ್ನು ನಟರಾಜ್‍ನೇ ಸಮ್ಮಾಳಿಸುತ್ತಿದ್ದನು. ಸ್ನೇಹಿತರ ಒತ್ತಾಯದ ಮೇರೆಗೆ ಎರಡನೇ ಮದುವೆಗೆ ನಿರ್ಧರಿಸಿ ಸಂಬಂಧಿಕ ಯುವತಿಯನ್ನು ಮದುವೆಯಾಗಲು ಅವರ ಕುಟುಂಬದವರೊಂದಿಗೆ ಮಾತನಾಡಿದಾಗ ವಿರೋಧ ವ್ಯಕ್ತವಾಗಿತ್ತು.  ವಿರೋಧದ ನಡುವೆಯೂ ಸಂಬಂಧಿಕ ಯುವತಿ ಪಲ್ಲವಿಯನ್ನು ಕಳೆದ ಮೂರು ದಿನಗಳ ಹಿಂದೆ ಗುಟ್ಟಾಗಿ ಪಂಡಾರಪುರದಲ್ಲಿ ಮದುವೆಯಾಗಿ ನಿನ್ನೆ ಸಂಜೆ ಗುಡಾಳುವಿಗೆ ಆಗಮಿಸಿದ್ದರು.

ಅದೇನಾಯಿತೋ ಏನೋ ಇಂದು ಮುಂಜಾನೆ ಮಕ್ಕಳು ಮಲಗಿದ್ದಾಗ ನಟರಾಜ್ ಮತ್ತು ಪಲ್ಲವಿ ಎದ್ದು ಅವರ ಜಮೀನಿಗೆ ಹೋಗಿ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಮಕ್ಕಳು ಬೆಳಗ್ಗೆ ಎದ್ದಾಗ ಅಪ್ಪ-ಅಮ್ಮ ಇಲ್ಲದಿರುವುದನ್ನು ಗಮನಿಸಿ ಹುಡುಕಾಡಿದ್ದಾರೆ. ಈ ವೇಳೆ ನೆರೆ ಮನೆಯವರು ನಿಮ್ಮ ಅಪ್ಪ-ಅಮ್ಮ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಸುದ್ದಿ ತಿಳಿಸಿದಾಗ ಪ್ರದೀಪ್ ಜಮೀನಿನ ಬಳಿ ಹೋಗಿ ನೋಡಿ ಹೆದರಿಕೊಂಡು ತಕ್ಷಣ ಮನೆಗೆ ಬಂದು ರೂಮಿನಲ್ಲಿ ಫ್ಯಾನ್‍ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಟರಾಜ್-ಪಲ್ಲವಿ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸುದ್ದಿ ತಿಳಿದ ಸಬ್‍ಇನ್ಸ್‍ಪೆಕ್ಟರ್ ಕಿರಣ್‍ಕುಮಾರ್, ಸಿಪಿಐ ಗುರು ಬಸವರಾಜ್, ಸಿಬ್ಬಂದಿ ನಟರಾಜ್ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮೂವರ ಶವಗಳನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin