ಮದುವೆ ಅಲಂಕಾರದಲ್ಲೇ ಬಂದು ಮತ ಹಾಕಿದ ಮದುಮಗಳು

ಈ ಸುದ್ದಿಯನ್ನು ಶೇರ್ ಮಾಡಿ

Kodagu--01

ಕೊಡಗು. ಮೇ.12 : ಮಡಿಕೇರಿಯಲ್ಲಿ ಮದುವೆಗೂ ಮುನ್ನ ಮದುಮಗಳು ತಮ್ಮ ಮತವನ್ನು ಚಲಾಯಿಸಿದ್ದಾರೆ. ಸ್ಮಿತಾ ಮತಹಾಕಿದ ಮದುಮಗಳು. ಮಡಿಕೇರಿಯ ಮೂವತೊಕ್ಕಲಿನ ಬಿಎಂಟಿಸಿ ಸಿಬ್ಬಂದಿ ಆದ ಪ್ರವೀಣ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಗೆಂದು ಅಲಂಕರಿಸಿಕೊಂಡಿದ್ದ ಸ್ಮಿತಾ ಮತಗಟ್ಟಿ ಸಂಖ್ಯೆ 131 ಯಲ್ಲಿಆಗಮಿಸಿದ ಸ್ಮಿತಾ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.   ಸ್ಮಿತಾ ಇಂದು ಗೌಡ ಸಮಾಜದಲ್ಲಿ ಮದುವೆ ಆಗುತ್ತಿದ್ದು, ಮಂಗಳೂರಿನಲ್ಲೂ ಕೂಡ ವಧುವೊಬ್ಬರು ತಮ್ಮ ಮತ ಚಲಾಯಿಸಿದ್ದಾರೆ. ನಗರದ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು, ಪಚ್ಚನಾಡಿಯ ಮದುಮಗಳು ವಿಯೋಲಾ ಮಾರಿಯಾ ಫೆರ್ನಾಂಡೀಸ್ ಮತದಾನ ಮಾಡಿದ್ದಾರೆ.

Facebook Comments

Sri Raghav

Admin