ಮದುವೆ ದಿಬ್ಬಣದ ಬಸ್ ಪಲ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಸಕಲೇಶಪುರ,ಜೂ.20-ಮದುವೆ ದಿಬ್ಬಣದ ಖಾಸಗಿ ಬಸ್ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಚಾಲಕನ ಅಜಾಗರೂಕತೆಯಿಂದಾಗಿ ಮಗುಚಿಬಿದ್ದ ಪರಿಣಾಮ ಹತ್ತು ಮಂದಿ ಗಂಭೀರ ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಿಡಗಟ್ಟ ಗ್ರಾಮದ ಸಿದ್ದಲಿಂಗ ಸ್ವಾಮಿ-ಕೀರ್ತಿ ಎಂಬುವರ ವಿವಾಹ ಧರ್ಮಸ್ಥಳದಲ್ಲಿ ನಿಶ್ಚಯವಾಗಿದೆ.

ಈ ನಿಮಿತ್ತ ಸಿದ್ದಲಿಂಗಸ್ವಾಮಿ ಅವರ ಸಂಬಂಧಿಗಳು ಖಾಸಗಿ ಬಸ್‍ನಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ವರ ಸಿದ್ದಲಿಂಗಸ್ವಾಮಿ ತನ್ನ ಕಾರಿನಲ್ಲಿ ತಾಯಿಯೊಂದಿಗೆ ತೆರಳಿದ್ದರು.  ತಾಲ್ಲೂಕಿನ ದುರ್ಗಾಂಬ ರೈಸ್‍ಮಿಲ್ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಮಗುಚಿಬಿದ್ದಿದೆ. ಪರಿಣಾಮ ಬಸ್‍ನಲ್ಲಿದ್ದ ಸುಮಾರು 40 ಜನರ ಪೈಕಿ 10 ಮಂದಿಗೆ ಗಂಭೀರ ಪೆಟ್ಟಾಗಿದ್ದು, ಉಳಿದವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.  ಈ ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯವಸ್ತಗೊಂಡಿತ್ತು. ಈ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ