ಮದುವೆ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Deepika-padukone

ಬಾಲಿವುಡ್ ಮತ್ತು ಹಾಲಿವುಡ್‍ಗಳೆರಡಲ್ಲೂ ಮಿಂಚುತ್ತಿರುವ ನೀಳ ಕಾಯದ ಚೆಲುವೆ ದೀಪಿಕಾ ಪಡುಕೋಣೆ ಸದ್ಯಕ್ಕೆ ಸಪ್ತಪದಿ ತುಳಿಯುವ ನಿರ್ಧಾರ ಮಾಡಿಲ್ಲವಂತೆ. ನಾನು ಮದುವೆಗೆ ಸಿದ್ಧಳಾಗಿಲ್ಲ. ಆ ಬಗ್ಗೆ ಸದ್ಯಕ್ಕೆ ಯಾವುದೇ ಆಲೋಚನೆಯೂ ನನ್ನಲ್ಲಿಲ್ಲ ಎಂದು ಆಕೆ ಖಡಾಖಂಡಿತವಾಗಿ ಹೇಳಿದ್ದಾಳೆ.  ಡಿಪ್ಪಿ ವಿವಾಹವನ್ನು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ನನ್ನ ಪ್ರಕಾರ ಮದುವೆಗೆ ವಯಸ್ಸು ಮುಖ್ಯವಲ್ಲ. ಇದು ವ್ಯಕ್ತಿಯ ಮನಸ್ಸಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಇದು ಸನ್ನಿವೇಶಗಳು ಮತ್ತು ಜನರ ಸ್ಥಿತಿಯನ್ನೂ ಆಧರಿಸಿರುತ್ತದೆ. ಇಂಥ ವಯಸ್ಸಿನಲ್ಲೇ ಮದುವೆಯಾಗಬೇಕೆಂಬ ಕಟ್ಟುಪಾಡುಗಳಲ್ಲಿ ನನಗೆ ನಂಬಿಕೆ ಇಲ್ಲ.

ಕೆಲವರು 40 ವರ್ಷದ ನಂತರ ವಿವಾಹವಾಗುತ್ತಾರೆ, ಇನ್ನು ಕೆಲವರು 20-21 ವರ್ಷದಲ್ಲೇ ಮದುವೆಯಾಗುತ್ತಾರೆ. ಅದು ಅವರವರ ವೈಯಕ್ತಿಕ ವಿಚಾರ. ನಾನಂತೂ ಸದ್ಯಕ್ಕೆ ಮದುವೆಯಾಗುವ ಯಾವುದೇ ನಿರ್ಧಾರ ಮಾಡಿಲ್ಲ. ನಾನು ಚಿತ್ರರಂಗದಲ್ಲಿ ಸಾಸಬೇಕಾದುದು ಸಾಕಷ್ಟು ಇದೆ. ಆಮೇಲೆ ಮದುವೆ, ಮಕ್ಕಳು ಮತ್ತು ಸಂಸಾರ ವ್ಯವಹಾರ ಇದ್ದೇ ಇದೆ ಎಂದು ದೀಪಿಕಾ ಸಂದರ್ಶನವೊಂದರಲ್ಲಿ ಹೇಳಿದ್ದಾಳೆ.  ದೀಪಿಕಾ ಮತ್ತು ರಣವೀರ್ ಸಿಂಗ್ ನಡುವೆ ಪ್ರೇಮ ಸಂಬಂಧವಿರುವ ಬಗ್ಗೆ ಬಿ-ಟೌನ್‍ನಲ್ಲಿ ಗುಸುಗುಸು ಹಬ್ಬಿರುವಾಗಲೇ ಈಕೆ ಮದುವೆ ಸಾಧ್ಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾಳೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಗಳಿಸುತ್ತಿರುವ ದೀಪಿಕಾ ದೊಡ್ಡ ಸಾಧನೆಯ ನಿರೀಕ್ಷೆಯಲ್ಲಿರುವಾಗ ಮದುವೆ ಬಗ್ಗೆ ಚಿಂತಿಸಲು ಆಕೆಗೆ ಸಮಯ ವೆಲ್ಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin