ಮದ್ದೂರಿನಲ್ಲಿ ಮರಕ್ಕಪ್ಪಳಿಸಿದ ಮದುವೆ ದಿಬ್ಬಣದ ಕ್ಯಾಂಟರ್ : 13 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--02

ಮಂಡ್ಯ, ಅ.30-ಕುಣಿಗಲ್-ಮದ್ದೂರು ಹೆದ್ದಾರಿಯಲ್ಲಿ ಮದುವೆ ದಿಬ್ಬಣದ ಕ್ಯಾಂಟರ್ ರಸ್ತೆಯ ಬದಿಯ ಮರಕ್ಕೆ ಗುದ್ದಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೇರಿದೆ. ಮೃತಪಟ್ಟವರನ್ನು ಯಡಾನಹಳ್ಳಿ ಹಾಗೂ ಅವಸರದಹಳ್ಳಿ ನಿವಾಸಿಜಗಳಾದ ಶಿವಮ್ಮ(45), ಸೋನು(4), ರೇಣುಕಮ್ಮ (40), ಮೀನಾಕ್ಷಿ (38), ಜಯಮ್ಮ (47), ಪಾರ್ವತಮ್ಮ (48), ಬೀರಮ್ಮ (51), ಸಣ್ಣಮ್ಮ (60), ನಾಗಮ್ಮ (63), ಕಾಳಮ್ಮ (63), ಕಮಲಮ್ಮ (75) ಹಾಗೂ ಕರಿಯಪ್ಪ(51) ಎಂದು ಗುರುತಿಸಲಾಗಿದೆ.

ಮದುವೆ ದಿಬ್ಬಣ ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ಮದ್ದೂರು ತಾಲೂಕಿನ ಮಾಚಳ್ಳಿಯ ತೊರೆಶೆಟ್ಟಹಳ್ಳಿ ಸಮೀಪ ಮತ್ತೊಂದು ವಾಹನವನ್ನು ಹಿಂದಿಕ್ಕುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಮತ್ತಷ್ಟು ಸಾವು ಸಂಭವಿಸುವ ಸಾಧ್ಯತೆ ಇದೆ.  ಪ್ರಕರಣ ದಾಖಲಿಸಿಕೊಂಡಿರುವ ಕೆಸ್ತೂರು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin