ಮದ್ಯದಂಗಡಿ ಬಂದ್‍ಗೆ ನಿರಂತರ ಹೋರಾಟ ನಿಷೇದಾಜ್ಞೆ

ಈ ಸುದ್ದಿಯನ್ನು ಶೇರ್ ಮಾಡಿ

5

ರಾಯಬಾಗ,ಸೆ.30- ತಾಲೂಕಿನ ನಸಲಾಪೂರ ಗ್ರಾಮದಲ್ಲಿ ಪ್ರಾರಂಭಿಸಿದ್ದ ಮದ್ಯದಂಗಡಿ ಬಂದ್ ಮಾಡಿ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ 12 ದಿನ ಗಳಿಂದ ಮದ್ಯದಂಗಡಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದ ಪ್ರತಿಭಟನಾ ಕಾರರು ನಿನ್ನೆ ನಡೆಸಲು ಉದ್ದೇಶಿತ ಗ್ರಾಮ ಬಂದ್ ಮತ್ತು ರಸ್ತೆ ತಡೆ ಚಳುವಳಿ ಕರೆಯನ್ನು ತಹಶೀಲ್ದಾರ ಮಧ್ಯ ಪ್ರವೇಶಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅನಿರ್ದಿಷ್ಟ ಕಾಲದವರೆಗೆ ನಿಷೇಧಾe್ಞÉ ಆದೇಶ ಹೊರಡಿಸಿದ್ದರಿಂದ ಉದ್ದೇಶಿತ ಚಳುವಳಿ ಹಿಂಪಡೆಯಲಾಯಿತು. ನಂತರ ಗ್ರಾಮಸ್ಥರೆಲ್ಲರೂ ಗ್ರಾಮದ ಕಾಂತೆ ಪ್ರೌಢಶಾಲೆಯಲ್ಲಿ ಜೈನಮುನಿ 108ಸುವಿಧಿ ಸ್ವಾಮೀಜಿಯವರ ಸಾನಿಧ್ಯದಲ್ಲಿ ಸಭೆ ನಡೆಸಿದರು.

55
ಸಭೈ ಉದ್ದೇಶಿಸಿ ಮಾತನಾಡಿದ ಸ್ವಾಮೀಜಿಯವರು, ಗಾಂಧೀಜಿಯವರ ಕನಸಾದ ರಾಮರಾಜ್ಯ ಮತ್ತು ಸರಾಯಿಮುಕ್ತ ಭಾರತ ಇನ್ನು ನನಸಾಗದೇ ಇರುವುದು ಅತ್ಯಂತ ದುಖಃಕರ ವಿಷಯವಾಗಿದೆ. ಗ್ರಾಮವು ಮೊದಲಿನಿಂದಲು ಶಾಂತಿ, ಸಹಬಾಳ್ವೆಗೆ ಹೆಸರುವಾಸಿಯಾಗಿದೆ. ಗ್ರಾಮಸ್ಥರು ಹೋರಾಟಕ್ಕೆ ಎಲ್ಲೆಡೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿರುವುದು ಕಂಡು ಬಂದರೂ, ಅಧಿಕಾರಿಗಳು ಇತ್ತ ಕಡೆ ಸರಿಯಾಗಿ ಗಮನ ಹರಿಸದೇ ಇರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ವಿಷಾದಿಸಿದರು. ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದ್ದು, ಇದಕ್ಕೆ ಸರಕಾರದ ಮತ್ತು ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ. ಕೇವಲ ನಸಲಾಪೂರ ಗ್ರಾಮದಲ್ಲಿ ಅಷ್ಟೇ ಅಲ್ಲದೇ ದೇಶದ ಪ್ರತಿಯೊಂದು ಗ್ರಾಮವು ಸರಾಯಿ ಮುಕ್ತ ಗ್ರಾಮವಾಗಬೇಕು. ಆಗ ಮಾತ್ರ ದೇಶದ ಪ್ರಜೆಗಳು ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ತಮ್ಮ ಜೀವನವನ್ನು ನಡೆಸುವಂತಾಗುತ್ತದೆ ಎಂದರು.

 

ಡಿಕೆಎಸ್‍ಎಸ್‍ಕೆ ಉಪಾಧ್ಯಕ್ಷ ಭರತೇಶ ಬನವಣೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಡಿ.ಎಮ್. ಐಹೊಳೆ ಮತ್ತು ರೈತಸಂಘ, ಕರವೇ ಸಂಘಟನೆಗಳು ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ನಮ್ಮ ಹೋರಾಟಕ್ಕೆ ಸಹಕಾರ ಮತ್ತು ಬೆಂಬಲ ವ್ಯಕ್ತಪಡಿಸಿದ್ದಾರೆ ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಇನ್ನು ಮುಂದೆಯಾದರೂ ಗ್ರಾಮಸ್ಥರೆಲ್ಲರೂ ಕೂಡಿಕೊಂಡು ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಡುವುದಿಲ್ಲ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಶಾಶ್ವತವಾಗಿ ಮದ್ಯದಂಗಡಿ ಬಂದ್ ಆಗಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರಕಾರ ಮತ್ತು ಅಧಿಕಾರಿಗಳೆ ಹೊಣೆಯಾಗುತ್ತಾರೆಂದರು.
ಸಭೈಯಲ್ಲಿ ಡಿಕೆಎಸ್‍ಎಸ್‍ಕೆ ನಿರ್ದೇಶಕ ಮಲ್ಲಿಕಾರ್ಜುನ ಕೋರೆ, ಮುಖಂಡರಾದ ಬಾಹುಸಾಹೇಬ ಪಾಟೀಲ, ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಧೂಳಗೌಡ ಪಾಟೀಲ, ಅಜೀತ ದೇಸಾಯಿ, ಮಾಜಿ ಶಾಸಕ ಕಲ್ಲಪ್ಪ ಮಗೇನ್ನವರ, ಮಹಾವೀರ ಪಾಟೀಲ, ಜಯಪಾಲ ಬೊರಗಾಂವೆ, ಡಾ. ಎನ್.ಎ. ಮಗದುಮ್ಮ, ತಾತ್ಯಾಸಾಬ ಕಾಟೆ, ಗ್ರಾಮ ಪಂಚಾಯತ ಅಧ್ಯಕ್ಷ ಬಾಳಾಸಾಹೇಬ ಸಮಾಜೆ, ಸುನೀಲ ಖಿಚಡೆ, ತುಕಾರಾಮ ಪಾಟೀಲ, ಅಬ್ದುಲ ತಾಂಬಟ, ರೈತಮುಖಂಡ ತ್ಯಾಗರಾಜ ಕದಂ, ರಾಜಗೌಡ ಪಾಟೀಲ, ಎಸ್.ಜಿ.ಖೊಂಬಾರೆ, ಸೇರಿದಂತೆ ಗ್ರಾಮಸ್ಥರು, ಮಹಿಳೆಯರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin