ಮದ್ಯದೊರೆ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Vijay-Malya

ನವದೆಹಲಿ, ನ.4– ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ 9 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಸಾಲ ಪಡೆದು ಸುಸ್ತಿದಾರರಾಗಿರುವ ಕಳಂಕಿತ ಉದ್ಯಮಿ ವಿಜಯ ಮಲ್ಯಗೆ ಎರಡೆರಡು ಕಾನೂನು ಕಂಟಕ ಎದುರಾಗಿದೆ. ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಎಫ್‍ಇಆರ್‍ಎ) ಉಲ್ಲಂಘನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಮನ್ಸ್‍ಗಳಿಗೆ ಪ್ರತ್ಯುತ್ತರ ನೀಡದ ಮಲ್ಯಗೆ ದೆಹಲಿ ನ್ಯಾಯಾಲಯವೊಂದು ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಇದೇ ವೇಳೆ ದೆಹಲಿ ನ್ಯಾಯಾಲವು, 2012ರ ಚೆಕ್ ಬೌನ್ಸ್ ಪ್ರಕರಣದಲ್ಲಿ ಮಲ್ಯ ವಿರುದ್ಧ ಇನ್ನೊಂದು ಜಾಮೀನು ರಹಿತ ವಾರೆಂಜ್ ಜಾರಿಗೊಳಿಸಿದ್ದು, ಮಲ್ಯಗೆ ಡಬಲ್ ಕಂಟಕ ಎದುರಾಗಿದೆ.

ಬಹುಕೋಟಿ ಸಾಲ ಪಡೆದು ಸುಸ್ತಿದಾರರಾಗಿರುವ ವಿಜಯಮಲ್ಯ, ಭಾರತದ ಕಾನೂನನ್ನು ಉಲ್ಲಂಘಿಸಿದ್ದಾರೆ. ಹಾಗೂ ಭಾರತಕ್ಕೆ ಹಿಂದಿರುಗುವ ಉದ್ದೇಶ ಹೊಂದಿಲ್ಲ. ಅಲ್ಲದೇ ನೀತಿ-ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ನ್ಯಾಯಾಲಯವು ಟೀಕಿಸಿದೆ.  ತಾವು ಭಾರತಕ್ಕೆ ಹಿಂದಿರುಗಲು ಸಿದ್ಧ. ಆದರೆ ತಮ್ಮ ಪಾಸ್‍ಪೋ ರದ್ದಾಗಿದೆ ಎಂದಿರುವ ಮಲ್ಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೋರ್ಟ್, ಕುಂಟು ನೆಪ ಒಡ್ಡಿರುವ ಅವರು ನಿಯಮದ ಪ್ರಕ್ರಿಯೆಯನ್ನು ಉಲ್ಲಂಘಿಸಿದ್ದಾರೆ ಎಂದು ಕಟುವಾಗಿ ಟೀಕಿಸಿದೆ.  ಇದೇ ವೇಳೆ ದೆಹಲಿ ನ್ಯಾಯಾಲವು, 2012ರ ಚೆಕ್ ಬೌನ್ಸ್ ಪ್ರಕರಣದಲ್ಲಿ ಮಲ್ಯ ವಿರುದ್ಧ ಇನ್ನೊಂದು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin