ಮದ್ಯಪ್ರಿಯರೇ ಹುಷಾರ್..ತುಮಕೂರಿನಲ್ಲಿ ಮಾರಾಟವಾಗುತ್ತಿದೆ ಎಕ್ಸ್ ಪೈರಿ ಬಿಯರ್..!

ಈ ಸುದ್ದಿಯನ್ನು ಶೇರ್ ಮಾಡಿ

Beer--01

– ಸಿ ಎಸ್ .ಕುಮಾರ್ ಚೇಳೂರು
ಮದ್ಯಪಾನ ಮಾಡುವುದೇ ಆರೋಗ್ಯಕ್ಕೆ ಹಾನಿಕರ. ಇನ್ನು ಎಕ್ಸ್‍ಪರಿಡೇಟ್ ಮುಗಿದ ಮದ್ಯ ಸೇವಿಸಿದರೆ ನಿಮ್ಮ ಆರೋಗ್ಯ ಏನಾಗಬಹುದು. ಮದ್ಯ ಪ್ರಿಯರೇ ಎಚ್ಚರ… ಎಚ್ಚರ…  ಜಿಲ್ಲೆಯಲ್ಲಿ ಅವಧಿ ಮುಗಿದಿರುವ ಮದ್ಯ ಸರಬರಾಜಾಗುತ್ತಿರುವುದು ಬೆಳಕಿಗೆ ಬಂದಿದೆ. ಗ್ರಾಮೀಣ ಪ್ರದೇಶ ಹಾಗೂ ಸಣ್ಣ ಪಟ್ಟಣಗಳಿಗೆ ಅವಧಿ ಮುಗಿದಿರುವ ಮದ್ಯದ ಬಾಟಲಿಗಳು ಸರಬರಾಜಾಗುತ್ತಿರುವ ದಂಧೆ ಬೆಳಕಿಗೆ ಬಂದಿದೆ.

ರಾಜ್ಯದ ಹೆದ್ದಾರಿಗಳ ಪಕ್ಕದಲ್ಲಿನ ಬಾರ್ ಗಳನ್ನು ಬಂದ್ ಮಾಡಿರುವುದರ ಪರಿಣಾಮ ಇದರ ಎಫೆಕ್ಟ್ ಗ್ರಾಮೀಣ ಪ್ರದೇಶದವರ ಮೇಲೆ ಬಿದ್ದಿದೆ. ಉತ್ತಮ ಗುಣಮಟ್ಟದ ಮದ್ಯದ ಬಾಟಲಿಗಳು ನಗರದಲ್ಲಿ ಮಾರಾಟವಾಗುತ್ತಿವೆ. ನಗರದಲ್ಲಿರುವ ವಿದ್ಯಾವಂತರು ಮದ್ಯ ತಯಾರಾದ ದಿನಾಂಕ, ಅವಧಿ ನೋಡಿ ಸೇವಿಸುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಅವಿದ್ಯಾವಂತರು ಯಾವುದನ್ನೂ ನೋಡುವುದಿಲ್ಲ. ತರಾತುರಿಯಲ್ಲಿ ಸೇವಿಸುತ್ತಾರೆ. ಕುಡಿದು ಬಿಡುತ್ತಾರೆ.
ಇಂತಹ ದಂಧೆ ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಂದನಕೆರೆಯಲ್ಲಿ ಅವಧಿ ಮುಗಿದಿರುವ ಮದ್ಯದ ಬಾಟಲಿಗಳು ಮಾರಾಟವಾಗುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ.

ಇಲ್ಲಿನ ಬಾರ್‍ವೊಂದರಲ್ಲಿ ವ್ಯಕ್ತಿಯೊಬ್ಬ ಬಿಯರ್ ಬಾಟಲ್ ಅನ್ನು ಖರೀದಿಸಿದ್ದು ಅದರ ಅವಧಿ ಮುಗಿದು ತಿಂಗಳುಗಳೇ ಕಳೆದಿದೆ. ಮದ್ಯದ ದಿನಾಂಕ ಮುಗಿದಿದೆಯಲ್ಲಾ ಬಾರ್ ಮಾಲೀಕರನ್ನು ಕೇಳಿದಾಗ ಅಯ್ಯೋ ಏನಾಗಲ್ಲಾ… ಕುಡಿಯಪ್ಪಾ… ನಾವು ಸುಮಾರು 250 ಕೇಸ್‍ಗಳನ್ನು ಮಾರಾಟ ಮಾಡಿದ್ದೇವೆ ಎಂದು ಆ ವ್ಯಕ್ತಿಗೆ ಸಮಜಾಯಿಷಿ ನೀಡಿದ್ದಾರೆ. ಹೋಗ್ಲಿ ನಮ್ಮ ಆರೋಗ್ಯದ ಮೇಲೇನಾದ್ರೂ ಪರಿಣಾಮ ಬೀರಿದ್ರೆ ಇರ್ಲಿ ಅಂತ ಒಂದು ಬಿಲ್ ಕೊಡಪ್ಪಾ.. ಅಂತಾ ಕೇಳಿದ್ರೆ… ಈ ಬಿಲ್ ಗಿಲ್ ಏನೂ ಇಲ್ಲಾ ಕಣಯ್ಯ. ನಮ್ಮ ಬಾರ್ ಮಾಲೀಕರು ತೆಗೆದುಕೊಂಡು ಹೋಗಿದ್ದಾರೆ ಎಂದು ಬಾರ್‍ನಲ್ಲಿ ಕೆಲಸ ಮಾಡುತ್ತಿರುವ ನೌಕರ ಉತ್ತರಿಸಿದ್ದಾನೆ.

ಈ ಬಾರ್‍ನ ಮುಂದೆ ಯಾವುದೇ ನಾಮಫಲಕವಿಲ್ಲ. ಮಾಲೀಕರ ಹೆಸರಿಲ್ಲ. ಪರವಾನಗಿ ಪಡೆಯದೆ ಮದ್ಯ ಮಾರಾಟ ಮಾಡುತ್ತಿದ್ದಾರೆಯೋ ಎಂಬ ಅನುಮಾನ ಕಾಡುತ್ತಿದೆ. ಇದು ಒಂದು ಪಟ್ಟಣದ ಕಥೆಯಲ್ಲಾ. ಬಹುತೇಕ ಪಟ್ಟಣ ಮತ್ತು ಹೋಬಳಿಗಳಲ್ಲಿ ಇಂತಹ ಮಾರಾಟ ಜಾಲ ನಿರಂತರವಾಗಿ ನಡೆಯುತ್ತಲೇ ಇದೆ.  ಗೂಡಂಗಡಿಯವರು ಮತ್ತು ಚಿಲ್ಲರೆ ಅಂಗಡಿಯವರು ನಗರದ ಬಾರ್‍ಗಳಿಂದ ಮದ್ಯದ ಬಾಟಲಿಗಳನ್ನು ಖರೀದಿಸಿ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಾರೆ. ತಂದ ಮದ್ಯ ಎಲ್ಲವೂ ಒಂದೇ ದಿನ ಮಾರಾಟವಾಗುವುದಿಲ್ಲ. ವಾರಗಳೇ ಕಳೆಯುತ್ತವೆ. ಮದ್ಯ ಕೆಡದಂತೆ ಶೇಖರಿಸಲು ಹಳ್ಳಿಗಳಲ್ಲಿ ಯಾವುದೇ ರೆಫ್ರಿಜಿರೇಟರ್‍ನಂತಹ ಅನುಕೂಲವಿರುವುದಿಲ್ಲ.

ಇದರಿಂದ ಸಾಕಷ್ಟು ಮದ್ಯ ಹಾಳಾಗುವ ಸಾಧ್ಯತೆಗಳಿವೆ. ಅಂಗಡಿಯವರು ಹೇಗೋ ಸೇಲಾದರೆ ಸಾಕು ಅಂತಾ ಇದನ್ನೇ ಮಾರಾಟ ಮಾಡು ಬಿಡುತ್ತಾರೆ. ಇದನ್ನು ಸೇವಿಸಿದವರ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮದ್ಯದ ಹಾವಳಿಯನ್ನು ಸಂಬಂಧಪಟ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

 

Facebook Comments

Sri Raghav

Admin