ಮದ್ಯ ದೊರೆ ವಿಜಯ್ ಮಲ್ಯಗೆ ಮತ್ತೊಂದು ಕಾನೂನು ಕಂಟಕ
ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ, ಅ.25- ವಿವಿಧ ಬ್ಯಾಂಕ್ ಗಳಿಗೆ ಕೋಟ್ಯಂತರ ರೂಪಾಯಿ ಸಾಲದ ಸುಸ್ತಿದಾರರಾಗಿರುವ ಕಳಂಕಿತ ಉದ್ಯಮಿ ವಿಜಯ್ ಮಲ್ಯಗೆ ಇದೀಗ ಇನ್ನೊಂದು ಕಾನೂನು ಕಂಟಕ ಎದುರಾಗಿದೆ. ಇನ್ನು ನಾಲ್ಕು ವಾರಗಳ ಒಳಗೆ ವಿದೇಶಗಳಲ್ಲಿರುವ ತಮ್ಮ ಆಸ್ತಿಗಳ ಸಂಪೂರ್ಣ ವಿವರಗಳನ್ನು ನೀಡಬೇಕೆಂದು ಮಲ್ಯಗೆ ಸುಪ್ರೀಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.ಡಿಯಾಗಿಯೋ ಸಂಸ್ಥೆಯಿಂದ ಸ್ವೀಕರಿಸಿದ 40 ದಶಲಕ್ಷ ಡಾಲರ್ ಮೊತ್ತವನ್ನು ತಾವು ಏನು ಮಾಡಿದೀರಿ ಎಂಬುದರ ಬಗ್ಗೆ ಬಹಿರಂಗಗೊಳಿಸ ಬೇಕೆಂದು ಸುಪ್ರೀಂ ತಿಳಿಸಿದ್ದು, ಮತ್ತೊಂದು ಕಾನೂನಿನ ಉರುಳು ಮಲ್ಯ ಕೊರಳಿಗೆ ಏರಿದಂತಾಗಿದೆ.ವಿದೇಶದಲ್ಲಿರುವ ಮಲ್ಯ ಭಾರತಕ್ಕೆ ಹಿಂದಿರುಗಲು ಕುಂಟು ನೆಪಗಳನ್ನು ಒಡ್ಡುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
► Follow us on – Facebook / Twitter / Google+
Facebook Comments