ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : ಜೀಪ್-ಟ್ರಕ್ ಡಿಕ್ಕಿ ,10 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Accide

ಉಜ್ಜೈನ್ (ಮಧ್ಯಪ್ರದೇಶ), ಸೆ.24-ಜೀಪ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಮಹಿಳೆಯರು ಮತ್ತು ಮೂವರು ಮಕ್ಕಳೂ ಸೇರಿದಂತೆ ಕನಿಷ್ಟ 10 ಮಂದಿ ಮೃತಪಟ್ಟು, 19 ಜನ ಗಾಯಗೊಂಡ ಘಟನೆ ಇಂದು ಮುಂಜಾ ನೆ ದೇವಸ್-ಉಜ್ಜೈನ್ ರಸ್ತೆಯಲ್ಲಿ ನಡೆದಿದೆ. ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಜೀಪ್ ಇಲ್ಲಿಗೆ 15 ಕಿ.ಮೀ.ದೂರದ ಚಂದೇಸರ ಗ್ರಾಮದಲ್ಲಿ ಎದುರು ದಿಕ್ಕಿನಿಂದ ಬರುತ್ತಿದ್ದ ಟ್ರಕ್ಗೆ ಅಪ್ಪಳಿಸಿತು. ಈ ದುರಂತದಲ್ಲಿ ಕನಿಷ್ಟ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರ್ ವರ್ಮಾ ಹೇಳಿದ್ದಾರೆ.

ಈ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತರಾದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಇತರ ಆರು ಮಂದಿ ಕೊನೆಯುಸಿರೆಳೆದರು. 19 ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin