ಮಧ್ಯಪ್ರದೇಶದ ಮಂಡಸೌರ್ನಲ್ಲಿ ಕಫ್ರ್ಯೂ ಸಡಿಲ

ಈ ಸುದ್ದಿಯನ್ನು ಶೇರ್ ಮಾಡಿ

Madyapradesh

ಮಂಡಸೌರ್, ಜೂ.9-ಮಧ್ಯ ಪ್ರದೇಶದ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸ್ ಗೋಲಿಬಾರ್ನಿಂದ ಐವರು ಮೃತಪಟ್ಟ ಹಿನ್ನೆಲೆಯಲ್ಲಿ ಮಂಡಸೌರ್ ನಗರ ಹಾಗೂ ಪಿಪ್ಲಿಯಾ ಮಂಡಿಯಲ್ಲಿ ವಿಧಿಸಿದ್ದ ಕಫ್ರ್ಯೂವನ್ನು ಇಂದು ಸಡಿಲಗೊಳಿಸಲಾಗಿದೆ.  ಕಳೆದ ಎಂಟು ದಿನಗಳಿಂದ ರೈತರ ಪ್ರತಿಭಟನೆ, ಧರಣಿಯ ಬಿಸಿ ತಟ್ಟಿದ್ದ ಮಂಡಸೌರ್ ನಗರಕ್ಕೆ ಇಂದು ಯಾವುದೇ ಪ್ರತಿಭಟನೆ, ಧರಣಿ ಹಾಗೂ ಜಾಥಾ ಕಂಡುಬಂದಿಲ್ಲ.



ಹಾಗಾಗಿ ಇಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೂ ಕಫ್ರ್ಯೂ ಸಡಿಲಗೊಳಿಸಲಾಗಿದೆ ಎಂದು ಎಸ್ಪಿ ಮನೋಜ್ಕುಮಾರ್ಸಿಂಗ್ ತಿಳಿಸಿದ್ದಾರೆ.
ಅಂಗಡಿ-ಮುಂಗಟ್ಟುಗಳು ಇಂದು ಬೆಳಗ್ಗೆ ತೆರೆದಿದ್ದರಿಂದ ಸಾರ್ವಜನಿಕರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವ ಭರದಲ್ಲಿ ತೊಡಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಕೂಡ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin