ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ಮನೆ ಕುಸಿದು 7 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Flood

ಭೋಪಾಲ್, ಆ.20- ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರಹಟ್ಗಢ್ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಇಂದು ಬೆಳಗ್ಗೆ ಮನೆಯೊಂದು ಕುಸಿದು ಕನಿಷ್ಠ ಏಳು ಮಂದಿ ಮೃತಪಟ್ಟು, ಇತರ ಮೂವರು ತೀವ್ರ ಗಾಯಗೊಂಡಿದ್ದಾರೆ.  ಮಧ್ಯಪ್ರದೇಶದ ಕೆಲವೆಡೆ ಕಳೆದ ಕೆಲವು ದಿನಗಳಿಂದ ವರುಣನ ರುದ್ರ ನರ್ತನದಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಇಂದು ಬೆಳಗ್ಗೆ ಭೋರ್ಗರೆಯುವ ನೀರು ಮನೆಗಳಿಗೆ ನುಗ್ಗಿ ಈ ದುರಂತ ಸಂಭವಿಸಿತು.  ರೇವಾ ಮತ್ತು ಸಾತ್ನ ಜಿಲ್ಲೆಗಳಲ್ಲಿ ಪ್ರವಾಹದಿಂದ ಸುಮಾರು 80 ಗ್ರಾಮಗಳು ಮುಳುಗಡೆಯಾಗಿದ್ದು, 25,000 ಮಂದಿ ಸಂತ್ರಸ್ತರಾಗಿದ್ದಾರೆ.
ಭಾರೀ ಮಳೆ ಮತ್ತು ನೆರೆ ಹಾವಳಿ ಕಡಿಮೆಯಾಗುವ ತನಕ ಈ ಎರಡು ಜಿಲ್ಲೆಗಳ ಕೆಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ನೆರವಾಗಲು ಭಾರತೀಯ ಸೇನೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin