ಮಧ್ಯಪ್ರದೇಶದ ಸಿಎಂ ನೆರೆ ವೀಕ್ಷಣೆ ವೈಖರಿ ಇದು ..!

ಈ ಸುದ್ದಿಯನ್ನು ಶೇರ್ ಮಾಡಿ

Shivaraj

ಭೋಪಾಲ್ ಆ.22 : ಭೀಕರ ಪ್ರವಾಹದಿಂದ ತತ್ತರಿಸಿದ ಮಧ್ಯಪ್ರದೇಶ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನೆರೆ ವೀಕ್ಷಿಸಿದ ವೈಖರಿ ಇದು. ನೀರಿನಲ್ಲಿಳಿದರೆ ಷೂ ಹಾಳಾಗುತ್ತೆ, ಬಟ್ಟೆ ಒದ್ದಿಯಾಗುತ್ತೆ ಎಂದು ಇಬ್ಬರು ಪೊಲೀಸ್ ಕಾನ್ಸ್ಟೆಬಲ್ ಗಳ ಸಹಾಯದಿಂದ  ಚೌಹಾಣ್ ರನ್ನು ಸಹಾಯಕರು ಎತ್ತಿಕೊಂಡು ನೆರೆಪ್ರದೇಶಗಳಿಗೆ ಕರೆದೊಯ್ಯುತ್ತಿರುವ ಫೋಟೊ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.  ಶಿವರಾಜ್ ಸಿಂಗ್ ಚೌಹಾಣ್ ಅವರ ಈ ನಡೆಯನ್ನು ಮಧ್ಯಪ್ರದೇಶದ ಕಾಂಗ್ರೆಸ್ ಖಂಡಿಸಿದ್ದು ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರ ಕಷ್ಟಗಳನ್ನು ಆಲಿಸುವ ಬದಲು ತನ್ನೊಂದಿಗೆ ಇರುವ ಭದ್ರತಾ ಸಿಬಂದಿಗಳಿಗೆ ತೊಂದರೆ ನೀಡಿದ್ದಾರೆ, ಎಂದು ಆರೋಪಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin