ಮಧ್ಯಪ್ರದೇಶ ಸಿಎಂ ನಿರಶನ 2ನೇ ದಿನಕ್ಕೆ, ರೈತರ ಪ್ರತಿಭಟನೆ 11ನೇ ದಿನಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

MadyaPradesh--0000001

ಭೋಪಾಲ್, ಜೂ.11-ಐವರು ರೈತರನ್ನು ಬಲಿ ತೆಗೆದುಕೊಂಡ ಪೊಲೀಸ್ ಗೋಲಿಬಾರ್ ನಂತರ ಮಧ್ಯಪ್ರದೇಶದಲ್ಲಿ ಭುಗಿಲೆದ್ದಿರುವ ಅಶಾಂತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶಾಂತಿ ಮರುಸ್ಥಾಪನೆಗಾಗಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇನ್ನೊಂದೆಡೆ ರೈತರ ಪ್ರತಿಭಟನೆ ಮುಂದುವರಿದಿದ್ದು, 11ನೇ ದಿನಕ್ಕೆ ಪ್ರವೇಶಿಸಿದೆ.


ರಾಜಧಾನಿ ಭೂಪಾಲ್‍ನ ದುಸ್ಸೆರಾ ಮೈದಾನಲ್ಲಿ ನಿನ್ನೆ ವೆಳಗ್ಗೆ 11 ಗಂಟೆಯಿಂದ ಚೌಹಾಣ್ ತಮ್ಮ ಬೆಂಬಲಿಗರೊಂದಿಗೆ ನಿರಶನ ಆರಂಭಿಸಿದ್ದಾರೆ. ತಮ್ಮ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು, ಸಾಲ ಮನ್ನಾ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಧರಣಿ ಇಂದು ಹನ್ನೊಂದನೆ ದಿನಕ್ಕೆ ಕಾಲಿಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin