ಮಧ್ಯರಾತ್ರಿ ರಾಮನಗರ ಘಡ ಘಡ : ಭೂಕಂಪನ ಅನುಭವದಿಂದ ಬೆಚ್ಚಿಬಿದ್ದ ಜನ

ಈ ಸುದ್ದಿಯನ್ನು ಶೇರ್ ಮಾಡಿ

Earthquake-01

ರಾಮನಗರ, ಏ.9-ಮಧ್ಯರಾತ್ರಿ ಪಟ್ಟಣದಲ್ಲಿ ಭೂಕಂಪನದ ಅನುಭವವಾಗಿದೆ. ನಿದ್ದೆಯಲ್ಲಿದ್ದ ಕೆಲವರು ಹೆದರಿ ಮನೆಯಿಂದ ಹೊರಗೋಡಿ ಬಂದಿರುವ ಘಟನೆ ವರದಿಯಾಗಿದೆ.ರಾತ್ರಿ ಸುಮಾರು 12.05 ಸಮಯದಲ್ಲಿ ಭೂಮಿ ಅಲುಗಾಡಿದ ಅನುಭವವಾಯಿತು ಎಂದು ರಾಮನಗರದ ದೊಡ್ಡಹಳ್ಳಿ ಗ್ರಾಮದ ಮರೀಚಿಕ್ಕೆ ಗೌಡ ಹೇಳಿದ್ದಾರೆ.ಇದೇ ವೇಳೆ ಐದಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿದ್ದು, ಭೂಕಂಪನವಾಗಿದೆ ಎಂದು ಇಂದು ಬೆಳಗ್ಗೆಯಿಂದಲೇ ಜಿಲ್ಲಾಡಳಿತ ಕಚೇರಿಗೆ ದೂರವಾಣಿ ಕರೆ ಮಾಡುತ್ತಿದ್ದಾರೆ. ಭಾನುವಾರವಾದ್ದರಿಂದ ಅಧಿಕಾರಿಗಳು ಗ್ರಾಮಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೆಟ್ಟ-ಗುಡ್ಡಗಳಿಂದ ಆವೃತವಾಗಿರುವ ದೊಡ್ಡನಹಳ್ಳಿಯಲ್ಲಿ ಭೂಕಂಪನದ ಅನುಭವವಾಗಿದೆ. ಕೆಲವರು ಅತಿಯಾಗಿ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದೂ, ಇದರಿಂದ ಪ್ರಕೃತಿ ವೈಪರೀತ್ಯ ಉಂಟಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin