ಮಧ್ಯವರ್ತಿಗಳಿಗೆ ನೀಡುವ ಹಣಕಾಸು ವಿವರ ನೀಡುವಂತೆ ಗುತ್ತಿಗೆದಾರರಿಗೆ ಸಿವಿಸಿ ಕಟ್ಟುನಿಟ್ಟಿನ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

CVC

ನವದೆಹಲಿ, ಜ.15- ಸರ್ಕಾರದಿಂದ ಬಹುಕೋಟಿ ರೂ.ಗಳ ಗುತ್ತಿಗೆಗಳನ್ನು ಪಡೆಯುವ ಸಂಸ್ಥೆಗಳ ಮೇಲೆ ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ತೀವ್ರ ನಿಗಾ ಇರಿಸಿದ್ದು, ದಲ್ಲಾಳಿಗಳು ಅಥವಾ ಯಾವುದೇ ಮಧ್ಯವರ್ತಿಗಳಿಗೆ ನೀಡಲಾಗುವ ಹಣಕಾಸು ವಿವರಗಳನ್ನು ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ವಿದೇಶಿ ಕಂಪೆನಿಗಳೊಂದಿಗೆ ಅಂತಹ ಸಂಸ್ಥೆಗಳು ಹೊಂದಿರುವ ಸಂಬಂಧವನ್ನು ಸಹ ಬಹಿರಂಗಗೊಳಿಸುವಂತೆಯೂ ತಿಳಿಸಿದೆ. ಇದರೊಂದಿಗೆ ಸರ್ಕಾರದ ಯೋಜನೆಗಳಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ರಹಿತ ವ್ಯವಸ್ಥೆ ಜಾರಿಗೊಳಿಸುವ ತನ್ನ ಹಿಡಿತವನ್ನು ಮತ್ತಷ್ಟು ಬಲಗೊಳಿಸಿದೆ. ಸರ್ಕಾರದಿಂದ ಬಹುಕೋಟಿ ರೂ. ಯೋಜನೆಗಳ ಗುತ್ತಿಗೆ ಪಡೆಯುವ ದೇಶ ಮತ್ತು ವಿದೇಶಿ ಕಂಪೆನಿಗಳ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹೊಸ ಕಾನೂನುಗಳನ್ನು ರೂಪಿಸಲಾಗಿದ್ದು, ಕೆಲವು ನೀತಿ-ನಿಯಮಗಳನ್ನು ರೂಪಿಸಲಾಗಿದೆ.

ಹೊಸ ನಿಯಮಗಳನ್ವಯ ಗುತ್ತಿಗೆಗಳಲ್ಲಿ ದಲ್ಲಾಳಿಗಳು ಅಥವಾ ಯಾವುದೇ ಮಧ್ಯವರ್ತಿಗಳಿಗೆ ನೀಡಲಾಗುವ ಹಣಕಾಸು ವ್ಯವಹಾರಗಳನ್ನು ತಿಳಿಸುವಂತೆ ಸಿವಿಸಿ ಸೂಚಿಸಿದೆ. ದಲ್ಲಾಳಿಗಳಿಗೆ ಭಾರೀ ಮೊತ್ತದ ಹಣ ನೀಡಿ ಗುತ್ತಿಗೆ ವ್ಯವಹಾರಗಳನ್ನು ಪಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.  ಅಲ್ಲದೆ, ಭಾರತೀಯ ಬಿಡ್‍ದಾರರು, ವಿದೇಶಿ ಸಂಘ-ಸಂಸ್ಥೆಗಳೊಂದಿಗೆ ಹೊಂದಿರಬಹುದಾದ ಒಡನಾಟಗಳ ಬಗ್ಗೆಯೂ ಸವಿವರ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ.

ಕೇಂದ್ರ ಸರ್ಕಾರಿ ಇಲಾಖೆಗಳಿಂದ ನೀಡಲಾಗುವ ಕೋಟ್ಯಂತರ ರೂ. ವೆಚ್ಚದ ಗುತ್ತಿಗೆ ವ್ಯವಹಾರಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಭ್ರಷ್ಟಾಚಾರ ಮತ್ತು ಅಕ್ರಮ ಅವ್ಯವಹಾರಗಳಲ್ಲಿ ತೊಡಗಿರುವ ಬಗ್ಗೆ ಸಿಬಿಐನಂತಹ ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ ಸಿವಿಸಿ ಸೂಚನೆಗೆ ಭಾರೀ ಪ್ರಾಮುಖ್ಯತೆ ಲಭಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin