‘ಮನಸು ಮಲ್ಲಿಗೆ’ ಚಿತ್ರದ ಕ್ಲೈಮ್ಯಾಕ್ಸ್ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಂಬರೀಶ್

ಈ ಸುದ್ದಿಯನ್ನು ಶೇರ್ ಮಾಡಿ

Ambarish--1
ಬೆಂಗಳೂರು. ಮಾ.31 : ಮಂಡ್ಯದ ಗಂಡು ಖ್ಯಾತಿಯ ಅಂಬರೀಶ್ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದು, ಅವರು ಸಿನಿಮಾ ನೋಡಿ ಭಾವಾವೇಶಕ್ಕೆ ಒಳಗಾಗಿದ್ದು ತುಂಬಾ ಅಪರೂಪ. ನಿನ್ನೆ ರಾತ್ರಿ ಮನಸು ಮಲ್ಲಿಗೆ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶ ನೋಡಿದ ಅಂಬರೀಶ್ ಬಿಕ್ಕಿ ಬಿಕ್ಕಿ ಅಳತೊಡಗಿದರು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರ ಕಣ್ಣಲ್ಲೂ ನೀರು ಸುರಿಯತೊಡಗಿತು. ನಿರ್ದೇಶಕ ನಾರಾಯಣ್ ಅವರು ಸಮಾಧಾನ ಮಾಡಲು ಹೋದಾಗ ಅವರನ್ನು ಛೇಡಿಸಿದ ಅಂಬರೀಶ್, ಏನ್ರೀ… ಇಷ್ಟೊಂದು ಕಣ್ಣೀರು ಬರಿಸುವ ಸಿನಿಮಾನಾ ಮಾಡೋದು…? ಎಂದರು.

Ambarish--2

ಇದು ಚಿತ್ರದ ಬಗ್ಗೆ ಅವರು ಆಡಿದ ಮೆಚ್ಚುಗೆಯ ಮಾತು. ರಾಕ್‍ಲೈನ್ ವೆಂಕಟೇಶ್ ಕೂಡ ಈವರೆಗೆ 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದು, ಇಂತಹ ಮನ ಕಲಕುವ ಚಿತ್ರ ಬಂದಿರಲಿಲ್ಲ ಎಂದು ನಿನ್ನೆ ನೆರೆದಿದ್ದ ಗಣ್ಯರ ಅನಿಸಿಕೆ.  ಇದು ನಾರಾಯಣ್ ನಿರ್ದೇಶನದ 49ನೆ ಚಿತ್ರ. ಮರ್ಯಾದಾ ಹತ್ಯೆಯ ಅಂಶವೂ ಚಿತ್ರದಲ್ಲಿ ಬರುವುದರಿಂದ ಇದು ಈ ಮಟ್ಟಿಗೆ ಮನ ಸೆಳೆದಿದೆ. ನಾರಾಯಣ ಎದ್ದರು, ರಾಕ್‍ಲೈನ್ ಗೆದ್ದರು ಎಂಬ ಮಾತು ಮಾರ್ದನಿಸಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Ambarish--3

Facebook Comments

Sri Raghav

Admin